ಜೆಡಿ(ಯು) ನಿತೀಶ್ ಗೆ ಮಾತ್ರ ಸೇರಿದ ಪಕ್ಷವಲ್ಲ, ನನಗೂ ಸೇರಿದೆ: ಶರದ್ ಯಾದವ್

ಜೆಡಿಯು ಪಕ್ಷ ಕೇವಲ ನಿತೀಶ್ ಕುಮಾರ್ ಗೆ ಮಾತ್ರ ಸೇರಿದ ಪಕ್ಷವಲ್ಲ, ನನ್ನ ಪಕ್ಷವೂ ಹೌದೆಂದು ಜೆಡಿಯು ನಾಯಕ ಶರದ್ ಯಾದವ್ ಹೇಳಿದ್ದಾರೆ.
ಶರದ್ ಯಾದವ್
ಶರದ್ ಯಾದವ್
Updated on: 
ಪಾಟ್ನಾ: ಜೆಡಿಯು ಪಕ್ಷ ಕೇವಲ ನಿತೀಶ್ ಕುಮಾರ್ ಗೆ ಮಾತ್ರ ಸೇರಿದ ಪಕ್ಷವಲ್ಲ, ನನ್ನ ಪಕ್ಷವೂ ಹೌದೆಂದು ಜೆಡಿಯು ನಾಯಕ ಶರದ್ ಯಾದವ್ ಹೇಳಿದ್ದಾರೆ. 
ಜೆಡಿಯು ಪಕ್ಷದ ರಾಜ್ಯಸಭೆ ನಾಯಕ ಸ್ಥಾನದಿಂದ ಹಿರಿಯ ಮುಖಂಡ ಶರದ್ ಯಾದವ್ ಅವರನ್ನು ವಜಾಗೊಳಿಸಿದ ಬಳಿಕ, ಶರದ್ ಯಾದವ್ ಪ್ರತಿಕ್ರಿಯೆ ನೀಡಿದ್ದು, ಮಧೇಪುರ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಸಂವಾದ್ ಯಾತ್ರದಲ್ಲಿ ಶರದ್ ಯಾದವ್ ಈ ಹೇಳಿಕೆ ನೀಡಿದ್ದಾರೆ. 
ಜೆಡಿಯು ಆರ್ ಜೆಡಿಯೊಂದಿಗಿನ ಮೈತ್ರಿಯನ್ನು ತೊರೆದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶರದ್ ಯಾದವ್, ಬಿಹಾರದಲ್ಲಿ ಎರಡು ಜೆಡಿಯುಗಳಿವೆ, ಒಂದು ಸರ್ಕಾರಿ ಜೆಡಿಯು ಮತ್ತೊಂದು ಜನತೆಯ ಜೆಡಿಯು. ಅಧಿಕಾರ ಬೇಕಿರುವವರು ನಿತೀಶ್ ಕುಮಾರ್ ಅವರೊಂದಿಗೆ ಇದ್ದಾರೆ, ಜನತೆಯೊಂದಿಗೆ ಇರುವವರು ನನ್ನೊಂದಿಗೆ ಇದ್ದಾರೆ ಎಂದು ಶರದ್ ಯಾದವ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com