ನವದೆಹಲಿ: ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಮಾಡಿದ ಭಾಷಣ ಕಳೆದ ನಾಲ್ಕು ವರ್ಷಗಳಲ್ಲಿ ಈ ವರ್ಷ ಕಡಿಮೆ ಅವಧಿಯದಾಗಿತ್ತು.
ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಕಳೆದ ಬಾರಿ ಮೋದಿಯವರು, ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣ ತುಂಬಾ ಉದ್ದವಾಗಿರುತ್ತದೆ ಎಂದು ಜನರು ಪತ್ರ ಬರೆದಿದ್ದಾರೆ. ಹೀಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ಚಿಕ್ಕದಾಗಿ ಮಾಡುವುದಾಗಿ ಭರವಸೆ ನೀಡಿದ್ದರು.
ತಾವು ಕೊಟ್ಟ ಮಾತಿನಂತೆ ನಡೆದಿರುವ ಪ್ರಧಾನಿ ಇಂದು 54 ನಿಮಿಷಗಳ ಕಾಲ ಭಾಷಣ ಮಾಡಿದ್ದು ಅವರು 2014ರ ನಂತರ ಕಡಿಮೆ ಸಮಯದಲ್ಲಿ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣವಾಗಿದೆ.
ಮೋದಿಯವರು 2014ರಲ್ಲಿ 65 ನಿಮಿಷ, 2015ರಲ್ಲಿ 86 ನಿಮಿಷ ಹಾಗೂ 2016ರಲ್ಲಿ 94 ನಿಮಿಷ ಮಾತನಾಡಿದ್ದರು.