ಕಾಂಗ್ರೆಸ್ ಸಹಕಾರ ಕೇಂದ್ರದ ಸದಸ್ಯರಾಗಿರುವ ರಾಹುಲ್ ಗಾಂಧಿ ಆಪ್ತ ಆಶಿಶ್ ಕುಲಕರ್ಣಿ ಅವರು ತಮ್ಮ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಿರುವ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದೆ. ಕೆಲವೊಂದು ವಿಷಯಗಳಲ್ಲಿ ಪಕ್ಷದ ನಿಲುವು ವಿಭಿನ್ನವಾಗಿರುವುದರಿಂದ ತಾವು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಆಶಿಶ್ ಕುಲಕರ್ಣಿ ಅವರು ರಾಜಿನಾಮೆ ಪತ್ರದಲ್ಲಿ ಬರೆದಿದ್ದಾರೆ.