ದೇಶ

ನೋಟು ಅಮಾನ್ಯ ನಂತರ ಶೇ.99ರಷ್ಟು 1000 ರು. ನೋಟುಗಳು ಆರ್‌ಬಿಐಗೆ ವಾಪಸ್?

ಹಳೆಯ 1000 ಮತ್ತು 500 ರು. ಮುಖಬೆಲೆಯ ನೋಟು ನಿಷೇಧದ ಬಳಿಕ ಕಾಳಧನಿಕರ ವಶದಲ್ಲಿದ್ದ ನೋಟುಗಳು ಬ್ಯಾಕಿಂಗ್ ವ್ಯವಸ್ಥೆಗೆ ಮರಳಿವೆ ಎಂಬ ಅನುಮಾನ...

ನೋಟು ಅಮಾನ್ಯ ನಂತರ ಶೇ.99ರಷ್ಟು 1000 ರು. ನೋಟುಗಳು ಆರ್‌ಬಿಐಗೆ  ವಾಪಸ್?
1000 ಮುಖಬೆಲೆಯ ನೋಟು
Published On :
ನವದೆಹಲಿ: ಹಳೆಯ 1000 ಮತ್ತು 500 ರು. ಮುಖಬೆಲೆಯ ನೋಟು ನಿಷೇಧದ ಬಳಿಕ ಕಾಳಧನಿಕರ ವಶದಲ್ಲಿದ್ದ ನೋಟುಗಳು ಬ್ಯಾಕಿಂಗ್ ವ್ಯವಸ್ಥೆಗೆ ಮರಳಿವೆ ಎಂಬ ಅನುಮಾನ ಶ್ರೀಸಾಮಾನ್ಯರಿಗೆ ಅಚ್ಚರಿಯ ಪ್ರಶ್ನೆಯಾಗಿ ಕಾಡಿತ್ತು. 
ಆದರೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವೆಬ್ ಸೈಟ್ ನಲ್ಲಿ, ಚಲಾವಣೆಯಲ್ಲಿದ್ದ 1000 ರು ಮುಖಬೆಲೆಯ ನೋಟುಗಳ ಪೈಕಿ ಶೇಕಡ 99ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಪ್ರಕಟಿಸಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ. 
ಕಳೆದ ವರ್ಷ ನವೆಂಬರ್ 8ರಂದು ಒಟ್ಟು 6.86 ಲಕ್ಷ ಕೋಟಿಯಷ್ಟು 1000 ರು. ನೋಟುಗಳು ಚಲಾವಣೆಯಲ್ಲಿದ್ದವು ಎಂದು ಹಣಕಾಸು ಇಲಾಖೆ ಸಹಾಯಕ ಸಚಿವ ಸಂತೋಷ ಗಂಗ್ವಾರ್ ಫೆಬ್ರವರಿ 3ರಂದು ಲೋಕಸಭೆಗೆ ಮಾಹಿತಿ ನೀಡಿದ್ದರು. 
ಈ ಪ್ರಮಾಣಕ್ಕೆ ಹೋಲಿಸಿದರೆ 8,925 ಕೋಟಿ ಎಂಬುದು ಕೇವಲ ಶೇ 1.3ರಷ್ಟಾಗುತ್ತದೆ. ಅಂದರೆ ಶೇ 98.7ರಷ್ಟು ನೋಟುಗಳು ಆರ್ಬಿಐಗೆ ಮರಳಿವೆ ಎಂದಾಯಿತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.