ಕುಟುಕು ಕಾರ್ಯಾಚರಣೆ ಮೂಲಕ ಉತ್ತರ ಪ್ರದೇಶದಲ್ಲಿ ಸರ್ಕಾರಿ ವೈದ್ಯರು ಖಾಸಗಿ ಪ್ರಾಕ್ಟೀಸ್ ನಲ್ಲಿ ತೊಡಗಿರುವುದನ್ನು ಖಾಸಗಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್, ಮಾಧ್ಯಮಗಳು ಎಂದಿಗೂ ನಕಾರಾತ್ಮಕ ಅಂಶಗಳನ್ನೇ ಬಿತ್ತರಿಸುತ್ತದೆ. ಸರ್ಕಾರದ ಹೊಣೆಗಾರಿಕೆ ಇದೆ ಎಂದು ಒಪ್ಪಿಕೊಳ್ಳುತ್ತೇವೆ, ಆದರೆ ಉಳಿದವರೆಲ್ಲರೂ ಜವಾಬ್ದಾರಿಯಿಂದ ವಿಮುಖರಾದಂತೆ ತೋರುತ್ತಿದೆ ಎಂದಿದ್ದು ಮಕ್ಕಳು ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿಯಲ್ಲ ಎಂಬ ಅರ್ಥ ಬರುವ ರೀತಿಯ ಹೇಳಿಕೆ ನೀಡಿದ್ದಾರೆ.