ಪಳನಿಸ್ವಾಮಿ ವಿಶ್ವಾಸಮತದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ತಮಿಳುನಾಡು ರಾಜ್ಯಪಾಲರ ನಕಾರ

ಎಐಎಡಿಎಂಕೆಯ 19 ಶಾಸಕರು ಮುಖ್ಯಮಂತ್ರಿ ಕೆ.ಪಳನಿಸ್ವಾಮಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದು ವಿಧಾನಸಭೆಯಲ್ಲಿ ....
ಸಿಎಚ್ ವಿದ್ಯಾಸಾಗರ್
ಸಿಎಚ್ ವಿದ್ಯಾಸಾಗರ್
Updated on: 
ಚೆನ್ನೈ: ಎಐಎಡಿಎಂಕೆಯ 19 ಶಾಸಕರು ಮುಖ್ಯಮಂತ್ರಿ ಕೆ.ಪಳನಿಸ್ವಾಮಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ತಮಿಳುನಾಡು ರಾಜ್ಯಪಾಲ ಸಿಎಚ್ ವಿದ್ಯಾಸಾಗರ್ ಅವರು ಬುಧವಾರ ನಿರಾಕರಿಸಿದ್ದಾರೆ.
ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಬೆಂಬಲಿತ 19 ಶಾಸಕರು ಮುಖ್ಯಮಂತ್ರಿ ಪಳನಿಸ್ವಾಮಿ ಬದಲಾವಣೆಗೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇಂದು ಸಿಪಿಐ, ಸಿಪಿಐ-ಎಂ, ವಿಸಿಕೆ ಹಾಗೂ ಎಂಎಂಕೆ ಪಕ್ಷಗಳ ನಾಯಕರು ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ವಿಶ್ವಾಸಮತಕ್ಕೆ ಸೂಚಿಸಬೇಕು ಎಂದು ಮನವಿ ಸಲ್ಲಿಸಿದರು.
ರಾಜ್ಯಪಾಲರ ಭೇಟಿಯ ಬಳಿಕ ಮಾತನಾಡಿದ ವಿಸಿಕೆ ಮುಖ್ಯಸ್ಥ ತೋಯಿ ತಿರುಮವಲವನ್ ಅವರು, ಬಂಡಾಯ ಶಾಸಕರು ಎಐಎಡಿಎಂಕೆಯಲ್ಲಿರುವವರೆಗೆ ನಾನು ಮಧ್ಯ ಪ್ರವೇಶಿಸಿಲು ಬರುವುದಿಲ್ಲ. ಒಂದು ವೇಳೆ 19 ಶಾಸಕರು ತಾವು ಬೆಂಬಲ ಹಿಂಪಡೆದಿರುವುದಾಗಿ ಪ್ರತ್ಯೇಕ ಪತ್ರಗಳನ್ನು ಸಲ್ಲಿಸದರೆ ಅಥವಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೆ, ಇಲ್ಲವೇ ಅವರು ಮತ್ತೊಂದು ಪಕ್ಷ ಸೇರಿದರೆ ಮಾತ್ರ ವಿಶ್ವಾಸಮತಯಾಚನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದರು.
ಈ ಮಧ್ಯೆ, ವಿಶ್ವಾಸಮತಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸದರು ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com