ಇದೇ ವೇಳೆ ಎಐಎಡಿಎಂಕೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವೈಕೊ, ಎಐಎಡಿಎಂಕೆಗೆ ಪಾಠ ಕಲಿಸುವ ಅಗತ್ಯ ಇಲ್ಲ. ಅವರು ಈಗಾಗಲೇ ಜನರ ನಂಬಿಕೆ ಕಳೆದುಕೊಂಡಿದ್ದಾರೆ ಎಂದರು. ಇನ್ನು ಬಿಜೆಪಿ ಹಿಂದೂತ್ವವನ್ನು ಮುಂದಿಟ್ಟುಕೊಂಡು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.