ನರೇಂದ್ರ ಮೋದಿ ಸರ್ಕಾರ ಕೇವಲ ಶ್ರೀಮಂತರ ಪರವೇ?: ರಾಹುಲ್ ಗಾಂಧಿ ಪ್ರಶ್ನೆ

ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಸಾಮಾನ್ಯ ಬಡ ಜನತೆಗೆ ಬದುಕು ದುಸ್ತರವಾಗುತ್ತಿದ್ದು ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on: 
ನವದೆಹಲಿ: ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಸಾಮಾನ್ಯ ಬಡ ಜನತೆಗೆ ಬದುಕು ದುಸ್ತರವಾಗುತ್ತಿದ್ದು ತಮ್ಮ ಸರ್ಕಾರ ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರವೇ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಅವರು ತಮ್ಮ ದಿನಕ್ಕೊಂದು ಪ್ರಶ್ನೆ ಸರಣಿಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆರೋಪಿಸಿ, ನೋಟುಗಳ ಅನಾಣ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಸಾಮಾನ್ಯ ಜನತಯ ಆದಾಯದ ಮೇಲೆ ಹೊಡೆತವನ್ನುಂಟುಮಾಡಿದ್ದು ಬಹುತೇಕ ವಸ್ತುಗಳ ಬೆಲೆಯೇರಿಕೆಯಿಂದ ಜೀವನ ದುಸ್ತರವಾಗಿದೆ. ಪ್ರಧಾನಿಯವರು ತಮ್ಮ ವಾಕ್ಚಾತುರ್ಯದಿಂದ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದರು.
ಕಳೆದ ಮೂರು ವರ್ಷಗಳ ಮೋದಿ ಸರ್ಕಾರದಲ್ಲಿ ಯಾವೆಲ್ಲಾ ವಸ್ತುಗಳ ಬೆಲೆಗಳು ಹೆಚ್ಚಳವಾಗಿದೆ ಎಂದು ಪಟ್ಟಿ ಮಾಡಿದ ಅವರು, ಇದು ಪ್ರಧಾನಿಯವರಿಗೆ ನನ್ನ ಏಳನೇ ಪ್ರಶ್ನೆಯಾಗಿದೆ. ದೇಶದ ಜನರು ಪ್ರಧಾನಿಯವರ ಈಡೇರದ ವಾಗ್ದಾನಗಳು, ನೋಟು ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ತತ್ತರಿಸಿ ಹೋಗಿದ್ದಾರೆ. ಜನರ ಆದಾಯವನ್ನು ಪ್ರಧಾನಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬೆಲೆ ಹೆಚ್ಚಳದಿಂದ ಜನ ಜೀವನ ದುಸ್ತರವಾಗುತ್ತಿದೆ. ಹಾಗಾದರೆ ಬಿಜೆಪಿ ಸರ್ಕಾರವಿರುವುದು ಕೇವಲ ಶ್ರೀಮಂತರಿಗಾಗಿ ಮಾತ್ರವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 2014ರಲ್ಲಿ ಮತ್ತು 2017ರಲ್ಲಿ ವಸ್ತುಗಳ ಬೆಲೆಗಳ ಪಟ್ಟಿಯ ಚಿತ್ರವನ್ನು ಕೂಡ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. 
22 ವರ್ಷಗಳ ಕಾಲ ಗುಜರಾತ್ ನಲ್ಲಿ ಬಿಜೆಪಿ ಆಡಳಿತದ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ದಿನಕ್ಕೊಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಬಿಜೆಪಿ ಈಡೇರಿಸದಿರುವ ಭರವಸೆಗಳ ಕುರಿತು ರಾಹುಲ್ ಗಾಂಧಿ ಪ್ರಶ್ನೆ ಮಾಡುತ್ತಿದ್ದಾರೆ.
ದಿನಕ್ಕೊಂದು ಪ್ರಶ್ನೆಯಲ್ಲಿ ರಾಹುಲ್ ಗಾಂಧಿ ಈ ಮುನ್ನ ಕಾರ್ಮಿಕರಿಗೆ ಕಡಿಮೆ ವೇತನ, ಮಹಿಳೆಯರ ಸುರಕ್ಷತೆ, ಶಿಕ್ಷಣ ಮತ್ತು ಆರೋಗ್ಯ ಕುರಿತು ಪ್ರಶ್ನೆಗಳನ್ನು ಕೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com