ದೆಹಲಿ, ಉತ್ತರಾಖಂಡ್ ನಲ್ಲಿ ಭೂಕಂಪನದ ಅನುಭವ

ದೆಹಲಿ ಮತ್ತು ರಾಜಧಾನಿ ವಲಯ ಹಾಗೂ ಉತ್ತರಾಖಂಡ್ ನಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿ ಮತ್ತು ರಾಜಧಾನಿ ವಲಯ ಹಾಗೂ ಉತ್ತರಾಖಂಡ್ ನಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ.ದೆಹಲಿ ಹಾಗೂ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪನ ದಾಖಲಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 
ಡೆಹ್ರಾಡೂನ್‌ನ 121 ಕಿಲೋ ಮೀಟರ್ ಪೂರ್ವ ವಲಯದಲ್ಲಿ ಭೂಕಂಪ ಸೃಷ್ಟಿಯಾಗಿರುವುದಾಗಿ ಇಎಂಎಸ್‌ಸಿ ಕೇಂದ್ರ ಟ್ವೀಟ್ ಮಾಡಿದೆ. ರುದ್ರಪ್ರಯಾಗದಲ್ಲಿ ಭೂಕಂಪ ತೀವ್ರತೆ ಪ್ರಮಾಣ 5.5 ಇತ್ತು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com