ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆದ ಕಾರಣವೋ ಅಥವಾ ಸರ್ಕಾರದ ನೆರವಿನಿಂದಲೋ ಇದೀಗ ಮಾಜ್ಹಿ ಆರ್ಥಿಕವಾಗಿ ಸಾಕಷ್ಟು ಸುಧಾರಣೆ ಕಂಡಿದ್ದಾನೆ. ಪ್ರಸ್ತುತ ಮಾಜ್ಹಿ ಒಡಿಶಾದ ಕಲಾಹಂಡಿಯಲ್ಲಿ ಒಂದು ಸ್ವಂತ ಮನೆಯನ್ನು ಹೊಂದಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಓಡಾಡಲು ಒಂದು ಸ್ವಂತ ಬೈಕ್ ಅನ್ನು ಕೂಡ ಖರೀದಿ ಮಾಡಿದ್ದು, ಇನ್ನು ಪ್ರಮುಖ ವಿತಾರವೆಂದರೆ ಮಾಜ್ಹಿ ಇದೀಗ ಎರಡನೇ ವಿವಾಹವಾಗಿದ್ದು, ಪತ್ನಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದು, ಆತನ ಮೂವರು ಹೆಣ್ಣುಮಕ್ಕಳು ಭುವನೇಶ್ವರದಲ್ಲಿ ಹಾಸ್ಟೆಲ್ ಇದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.