ನೋಯ್ಡಾ ಜೋಡಿ ಕೊಲೆ ಪ್ರಕರಣ:15 ವರ್ಷದ ಬಾಲಕನ ಬಂಧನ, ತಾಯಿ, ತಂಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಗೆ

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ವರ್ಷದ ಬಾಲಕನನ್ನು ಬಂಧಿಸಿದ್ದು, ತನ್ನ ತಾಯಿ ಮತ್ತು ಸಹೋದರಿಯನ್ನು ಬ್ಯಾಟ್ ಹಾಗೂ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗ್ರೇಟರ್ ನೋಯ್ಡಾ: ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ವರ್ಷದ ಬಾಲಕನನ್ನು ಬಂಧಿಸಿದ್ದು, ತನ್ನ ತಾಯಿ ಮತ್ತು ಸಹೋದರಿಯನ್ನು ಬ್ಯಾಟ್ ಹಾಗೂ ಫಿಜ್ಜಾ ಕಟ್ಟರ್ ನಿಂದ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಓದುವಂತೆ ತನ್ನ ಮೇಲೆ ಒತ್ತಡ ಹೇರುತ್ತಿರಿಂದ ಮತ್ತು ಬೈಯುತ್ತಿದ್ದರಿಂದ ಆಕ್ರೋಶಗೊಂಡ ಬಾಲಕ, ಸೋಮವಾರ ರಾತ್ರಿ ಮಲಗಿದ್ದ ವೇಳೆ ತಾಯಿ ಅಂಜಲಿ ಅಗರವಾಲ್(42) ಹಾಗೂ ತಂಗಿ(12) ಸೋನಿ ಕಣಿಕಾಳನ್ನು ಹತ್ಯೆ ಮಾಡಿದ ಬಾಲಕನನ್ನು ನಿನ್ನೆ ವಾರಣಾಸಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗೌರ್ ಸಿಟಿ ಅಪಾರ್ಟ್ ಮೆಂಟ್ ನಲ್ಲಿ ಅಂಜಲಿ ಮತ್ತು ಸೋನಿ ಮೃತದೇಹ ಪತ್ತೆಯಾಗಿದ್ದು, ಘಟನೆ ನಂತರ ತಲೆಮರೆಸಿಕೊಂಡಿದ್ದ ಬಾಲಕನನ್ನು ಇಂದು ಬಂಧಿಸಲಾಗಿದೆ.
ಬಾಲಕ ತನ್ನ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಬಿಸ್ಕರ್ಖ್ ಪೊಲೀಸ್ ಠಾಣೆಯ ಅಧಿಕಾರಿ ಅಜಯ್ ಶರ್ಮಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com