ದೇಶ

ಆಸ್ಟ್ರೇಲಿಯಾ: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ ಸಮುದ್ರದಲ್ಲಿ ಮುಳುಗಿ ಸಾವು

ಆಸ್ಟ್ರೇಲಿಯಾ: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ ಸಮುದ್ರದಲ್ಲಿ ಮುಳುಗಿ ಸಾವು
ಆಸ್ಟ್ರೇಲಿಯಾ: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ ಸಮುದ್ರದಲ್ಲಿ ಮುಳುಗಿ ಸಾವು
Published On :
ನವದೆಹಲಿ: ಭಾರತೀಯ ಮೂಲದ ಫುಟ್ ಬಾಲ್ ಆಟಗಾರ್ತಿ ಆಸ್ಟ್ರೇಲಿಯಾದ ಗ್ಲೆನೆಲ್ಗ್ ಬೀಚ್ ನಲ್ಲಿ ಮುಳುಗಿ ಮೃತರಾಗಿದ್ದಾರೆ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ ಜಿ ಎಫ್ ಐ) ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ
ಕ್ರೀಡಾಕೂಟ ಮುಗಿದ ನಂತರ ಕಡಲತೀರಕ್ಕೆ ತೆರಳಿದ್ದಾಗ ಎದ್ದ ಭಾರಿ ಅಲೆಗಳ ಹೊಡೆತಕ್ಕೆ ಐವರು ಭಾರತೀಯ ಫುಟ್ಬಾಲ್ ಆಟಗಾರರು ಸಿಲುಕಿದ್ದರು. ಅದರಲ್ಲಿ ಈ ಯುವತಿ ಸಹ ಒಬ್ಬರಾಗಿದ್ದರು.ಮೃತ ಯುವತಿಯನ್ನು ನಿತಿಶಾ ನೇಗಿ  ಎಂದು ಗುರುತಿಸಲಾಗಿದೆ.
ಎರಡು ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ನೇತೃತ್ವದ ಎಸ್ ಜಿ ಎಫ್ ಐ  ಹಾಕಿ, ಫುಟ್ಬಾಲ್ ಮತ್ತು ಸಾಫ್ಟ್ ಬಾಲ್ ಸೇರಿದಂತೆ ಆರು ವಿಭಾಗಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಿತ್ತು. ಬೇರೆಲ್ಲಾ ತಂಡಗಳೊಡನೆ ಈ ಫುಟ್ಬಾಲ್ ತಂಡವೂ ಆಸ್ಟ್ರೇಲಿಯಾಗೆ ತೆರಳಿತ್ತು.
ಕಡಲತೀರದ ಬಂಡೆಯೊಂದರ ಬಳಿ ಅವಳ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುರಿತಂತೆ ತನಿಖೆ ನಡೆಸಲು ಕ್ರೀಡಾ ಸಚಿವರು ಆದೇಶ ನೀಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.