ಸಿಂಗ್ ಅವರು ಹೈದರಾಬಾದ್ ನ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ದ ಸಂಸ್ಥಾಪಕರು, ಹಾಗೂ ಇವರು ಅಂಡಮಾನ್ ನಿಕೋಬಾರ್ ನ ಬುಡಕಟ್ಟು ಜನರಿಗೆ ನೀಡಿದ್ದ ಸಹಾಯಕ್ಕಾಗಿ ಅಂತರಾಷ್ಟ್ರೀಯ ಮೆಚ್ಚುಗೆಗೆ ಪಾತ್ರರಾಗಿದ್ದರು.ಇವರು 1998 ಹಾಗೂ 2009.ರ ನಡುವೆ ಸಿಸಿಎಂಬಿ ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಬಿಎಚ್ ಯು ನ ಉಪ ಕುಲಪತಿಗಳಾಗಿ ಸಿಂಗ್ 2011 ರಲ್ಲಿ ನೇಮಕಗೊಂಡು 2014.ರವರೆಗೆ ಆ ಸ್ಥಾನದಲ್ಲಿ ಕೆಲಸ ಮಾಡಿದ್ದರು.