ಪ್ರಧಾನಿ ಅಣಬೆ ಸೇವಿಸುತ್ತಾರೆ ಹೇಳಿಕೆ ಬಗ್ಗೆ ಥೈವಾನ್ ಮಹಿಳೆಯ ಪ್ರತಿಕ್ರಿಯೆ, ಅಲ್ಪೇಶ್ ಠಾಕೂರ್ ಗೆ ಮುಖಭಂಗ!

ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ನಿಂದ ಬರುವ ವಿಶೇಷ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಹೇಳಿಕೆಗೆ ಥೈವಾನ್ ನ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ತನ್ನ ದೇಶದಲ್ಲಿ ಅಂತಹ ವಿಶೇಷ ಅಣಬೆ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಪೇಶ್ ಠಾಕೂರ್
ಅಲ್ಪೇಶ್ ಠಾಕೂರ್
Updated on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ನಿಂದ ಬರುವ ವಿಶೇಷ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಹೇಳಿಕೆಗೆ ಥೈವಾನ್  ನ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ತನ್ನ ದೇಶದಲ್ಲಿ ಅಂತಹ ವಿಶೇಷ ಅಣಬೆ ಸಿಗುವುದಿಲ್ಲ ಎಂದು ಹೇಳಿದ್ದಾರೆ. 
ಥೈವಾನ್ ನ ಮಹಿಳೆ ಮೆಸ್ಸಿ ಜೋ ವಿಡಿಯೋ ಅಪ್ ಲೋಡ್ ಮಾಡಿದ್ದು, ತನ್ನ ದೇಶದಲ್ಲಿ ಅಲ್ಪೇಶ್ ಠಾಕೂರ್ ಹೇಳಿರುವಂತಹ ವಿಶೇಷ, ದುಬಾರಿ ಅಣಬೆ ಸಿಗುವುದಿಲ್ಲ ಎಂದಿದ್ದು, ಭಾರತದ ರಾಜಕಾರಣಿಗಳು ಚುನಾವಣೆಗಳಲ್ಲಿ ತನ್ನ ದೇಶದ ಹೆಸರನ್ನು ಎಳೆದುತರುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. 
ನಾನು ಮೆಸ್ಸಿ ಜೋ, ಥೈವಾನ್ ನ ಮಹಿಳೆ, " ಥೈವಾನ್ ನಲ್ಲಿ 1,200 ಡಾಲರ್ ಮೌಲ್ಯದ ಅಣಬೆ ಸಿಗುತ್ತದೆ, ಅದನ್ನು ಸೇವಿಸಿದರೆ ಬೆಳ್ಳಗಾಗುತ್ತಾರೆ ಎಂದು ಭಾರತದ ರಾಜಕಾರಣಿಯೊಬ್ಬರು ಹೇಳಿದ್ದ ಸುದ್ದಿಯನ್ನು ನೋಡಿದೆ. ಆದರೆ ನಾನು ಈ ವರೆಗೂ ನನ್ನ ದೇಶದಲ್ಲಿ ಅಂತಹ ಯಾವುದೇ ವಿಶೇಷ ಅಣಬೆಯನ್ನು ಕಂಡಿಲ್ಲ ಹಾಗೂ ಅಣಬೆ ತಿಂದರೆ ಬೆಳ್ಳಗಾಗುತ್ತಾರೆ ಎಂಬುದು ಅಸಾಧ್ಯವಾದ ಸಂಗತಿ ಎಂದು ಹೇಳಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com