ಗುಜರಾತ್ ಚುನಾವಣೆ: ಡಿ.17ರಂದು 6 ಮತಗಟ್ಟೆಗಳಲ್ಲಿ ಮರು ಮತದಾನ

ಗುಜರಾತ್ ವಿಧಾನಸಭೆಗೆ ಕಳೆದ ಡಿಸೆಂಬರ್ 14ರಂದು ನಡೆದ ಎರಡನೇ ಹಂತದ ಚುನಾವಣೆ ವೇಳೆ ಆರು ಮತಗಟ್ಟೆಗಳಲ್ಲಿ ಅಧಿಕಾರಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಗಾಂಧಿನಗರ: ಗುಜರಾತ್ ವಿಧಾನಸಭೆಗೆ ಕಳೆದ ಡಿಸೆಂಬರ್ 14ರಂದು ನಡೆದ ಎರಡನೇ ಹಂತದ ಚುನಾವಣೆ ವೇಳೆ ಆರು ಮತಗಟ್ಟೆಗಳಲ್ಲಿ ಅಧಿಕಾರಿಗಳು ಇವಿಎಂಗಳಲ್ಲಿ ಅಸ್ತಿತ್ವದಲ್ಲಿರುವ ಡೇಟಾವನ್ನು ಅಳಿಸಲು ಮರೆತ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಆ ಆರು ಮತಗಟ್ಟೆಗಳಲ್ಲಿ ಡಿಸೆಂಬರ್ 17ರಂದು ಮರು ಮತದಾನಕ್ಕೆ ಶನಿವಾರ ಆದೇಶಿಸಿದೆ.
ಈ ಆರು ಮತಗಟ್ಟೆಗಳ ಚುನಾವಣಾ ಅಧಿಕಾರಿಗಳು ಅಣಕು ಚುನಾವಣಾ ಸಮೀಕ್ಷೆಯ ಫಲಿತಾಂಶಗಳನ್ನು ಅಳಿಸಿಹಾಕುವುದನ್ನು ಮರೆತಿದ್ದರು. ಹೀಗಾಗಿ ಡಿಸೆಂಬರ್ 14ರಂದು ಮರು ಮತದಾನ ನಡೆಸಲಾಗುತ್ತಿದೆ ಎಂದು ಗುಜರಾತ್ ಮುಖ್ಯ ಚುನಾವಣಾ ಆಯುಕ್ತ ಬಿಬಿ ಸ್ವೈನ್ ಅವರು ಹೇಳಿದ್ದಾರೆ.
ತೀವ್ರ ಕುತೂಹಲ ಕೆರಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್​ವಿಧಾನಸಭೆಗೆ ಎರಡು ಹಂತದ ಚುನಾವಣೆ ನಡೆದಿದ್ದು, ಡಿಸೆಂಬರ್ 18ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com