ಹಿಮಾಚಲ ಪ್ರದೇಶ ನೂತನ ಸಿಎಂ ಆಗಿ ಜೈರಾಮ್ ಠಾಕೂರ್ ಆಯ್ಕೆ ಸಾಧ್ಯತೆ!
ತೀವ್ರ ಕುತೂಹಲ ಕೆರಳಿಸಿರುವ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಸಿಎಂ ಅಭ್ಯರ್ಥಿ ಪಿಕೆ ಧುಮಾಲ್ ಚುನಾವಣೆಯಲ್ಲಿ ಸೋಲುಕಾಣುತ್ತಿದ್ದಂತೆಯೇ ಬಿಜೆಪಿಯ ಇತರೆ ಪ್ರಭಾವಿ ಶಾಸಕರಿಗೆ ಅದೃಷ್ಟ ಖುಲಾಯಿಸಿದಂತಿದೆ.
ಶಿಮ್ಲಾ: ತೀವ್ರ ಕುತೂಹಲ ಕೆರಳಿಸಿರುವ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಸಿಎಂ ಅಭ್ಯರ್ಥಿ ಪಿಕೆ ಧುಮಾಲ್ ಚುನಾವಣೆಯಲ್ಲಿ ಸೋಲುಕಾಣುತ್ತಿದ್ದಂತೆಯೇ ಬಿಜೆಪಿಯ ಇತರೆ ಪ್ರಭಾವಿ ಶಾಸಕರಿಗೆ ಅದೃಷ್ಟ ಖುಲಾಯಿಸಿದಂತಿದೆ.
ಹಿಮಾಚಲ ಪ್ರದೇಶ ಚುನಾವಣೆ ಬಳಿಕ ಹೊಸ ಸಿಎಂಗಾಗಿ ಬಿಜೆಪಿಯಲ್ಲಿ ಆಂತರಿಕ ಸರ್ಕಸ್ ಆರಂಭವಾಗಿದ್ದು, ಸಿಎಂ ರೇಸ್ ನಲ್ಲಿ ಸಾಕಷ್ಟು ಮಂದಿಯ ಹೆಸರು ಕೇಳಿಬರುತ್ತಿದೆ. ಆದರು ಪ್ರಮುಖವಾಗಿ ಸೆರಾಜ್ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜೈ ರಾಮ್ ಠಾಕೂರ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜೈರಾಮ್ ಠಾಕೂರ್ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಹಾಲಿ ಚುನಾವಣೆಯಲ್ಲಿ ಜೈರಾಮ್ ಠಾಕೂರ್ ಕಾಂಗ್ರೆಸ್ ಪಕ್ಷ ಚೇತ್ ರಾಮ್ ಅವರನ್ನು ಪರಾಭವಗೊಳಿಸಿದ್ದರು. 1998ರಲ್ಲಿ ಮೊದಲ ಬಾರಿಗೆ ಮಂಡಿ ಕ್ಷೇತ್ರದಿಂದ ಜೈರಾಮ್ ಠಾಕೂರ್ ಆಯ್ಕೆಯಾಗಿದ್ದರು.
ಪಕ್ಷ ನೀಡುವ ಯಾವುದೇ ರೀತಿಯ ಜವಾಬ್ಜಾರಿ ನಿಭಾಯಿಸಲು ಸಿದ್ಧ
ಇನ್ನು ತಾವು ಸಿಎಂ ರೇಸ್ ನಲ್ಲಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ಠಾಕೂರ್, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಪಕ್ಷದ ಮುಖಂಡರು ಯಾವುದೇ ಜವಾಬ್ದಾರಿ ನೀಡಿದರು ನಾನು ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರು ಕಾಂಗ್ರೆಸ್ ಪಕ್ಷದ ರಾಜಿಂದರ್ ರಾಣಾ ವಿರುದ್ಧ ಹೀನಾಯವಾಗಿ ಸೋಲುಂಡಿದ್ದರು. ಪಿಕೆ ಧುಮಾಲ್ 18,559 ಮತಗಳಿಗೆ ಮಾಡಿದ್ದರೆ, ರಾಣಾ 21,492 ಮತಗಳನ್ನು ಗಳಿಸಿದ್ದರು.