ಕೋಲ್ಕತ್ತಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಜೈಲಿನಿಂದ ಬಿಡುಗಡೆ

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೋಲ್ಕತ್ತಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಜೈಲಿನಿಂದ ಡಿ.20 ರಂದು ಬಿಡುಗಡೆಯಾಗಿದ್ದಾರೆ.
ನ್ಯಾ.ಸಿಎಸ್ ಕರ್ಣನ್
ನ್ಯಾ.ಸಿಎಸ್ ಕರ್ಣನ್
ಕೋಲ್ಕತ್ತಾ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೋಲ್ಕತ್ತಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಜೈಲಿನಿಂದ ಡಿ.20 ರಂದು ಬಿಡುಗಡೆಯಾಗಿದ್ದಾರೆ. 
6 ತಿಂಗಳ ಶಿಕ್ಷೆ ಅವಧಿ ಪೂರ್ಣಗೊಳಿಸಿದ ನಂತರ ಕರ್ಣನ್ ಬಿಡುಗಡೆಯಾಗಿದ್ದು, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ 6 ತಿಂಗಳ ಶಿಕ್ಷೆಗೊಳಗಾಗಿದ್ದರು. ಶಿಕ್ಷೆ ಪ್ರಕಟವಾಗುದ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ನ್ಯಾ.ಕರ್ಣನ್ ಅವರನ್ನು ಒಂದು ತಿಂಗಳ ಕಾರ್ಯಾಚರಣೆ ನಂತರ ಅಂದರೆ ಜೂ.20 ರಂದು ಪೊಲೀಸರು ಬಂಧಿಸಿದ್ದರು.   
ಹೈಕೋರ್ಟ್ ನ ಹಾಲಿ ನ್ಯಾಯಾಧೀಶರೊಬ್ಬರಿಗೆ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆ ವಿಧಿಸಿದ್ದ ವಿಲಕ್ಷಣ ಘಟನೆಗೆ ಕರ್ಣನ್ ಪ್ರಕರಣ ಸಾಕ್ಷಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com