ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 12,577 ವಾಸಸ್ಥಾನಗಳಲ್ಲಿರುವ 10.06 ಕೋಟಿ ಜನತೆ ವಿಷಯುಕ್ತ ಅಧಿಕ ಫ್ಲೋರೈಡ್ ಯುಕ್ತ ನೀರನ್ನು ಕುಡಿಯುತ್ತಿದ್ದಾರೆ. ಇದಕ್ಕಾಗಿ ನೀತಿ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು ಈ ಮೂಲಕ 1,327 ಆರ್ಸೆನಿಕ್ ವಿಷ ಮತ್ತು 12,014 ಫ್ಲೋರೈಡ್ ಯುಕ್ತ ಪ್ರದೇಶಗಳಲ್ಲಿ ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ಈ ಮೂಲಕ ಅಡುಗೆಗೆ ಮತ್ತು ಕುಡಿಯಲು ಸುರಕ್ಷಿತ ನೀರನ್ನು ಬಳಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.