ಗುಜರಾತ್ ಚುನಾವಣಾ ಫಲಿತಾಂಶ ಕುರಿತು ಮಣಿ ಶಂಕರ್ ಐಯ್ಯರ್ ಮೌನಕ್ಕೆ ಶರಣು!

ಇತ್ತೀಚೆಗೆ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ...
ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್
Updated on: 
ನವದೆಹಲಿ: ಇತ್ತೀಚೆಗೆ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಆದ್ಮಿ ಎಂದು ಕರೆದು ಮಣಿಶಂಕರ್ ಅಯ್ಯರ್ ಭಾರೀ ಸುದ್ದಿಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಅಮಾನತು ಕೂಡ ಆದರು.ಇಲ್ಲಿಯವರೆಗೆ ಯಾವುದೇ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದ, ಟೀಕಿಸುತ್ತಿದ್ದ ಮಣಿ ಶಂಕರ್ ಅಯ್ಯರ್ ಇದೀಗ ಮೌನಕ್ಕೆ ಶರಣು ಹೋಗಿದ್ದಾರೆ.
ಗುಜರಾತ್ ರಾಜ್ಯದ ಫಲಿತಾಂಶದ ಬಗ್ಗೆ ಮತ್ತು ಭಾರತೀಯ ಜನತಾ ಪಾರ್ಟಿ ಗೆದ್ದ ಬಗ್ಗೆ ಎಎನ್ಐ ಸುದ್ದಿಸಂಸ್ಥೆ  ವರದಿಗಾರ್ತಿ ಇಂದು ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ, ಮಾತನಾಡುವ ಗೋಜಿಗೆ ಹೋಗದೆ ಪತ್ರಿಕೆಯನ್ನು ಓದುವತ್ತ ತಮ್ಮ ಗಮನವನ್ನೆಲ್ಲಾ ಹರಿಸಿದರು.
ಗುಜರಾತ್ ಚುನಾವಣೆ ನಂತರ ಮೌನಕ್ಕೆ ಜಾರಿರುವ ಮಣಿಶಂಕರ್ ಅಯ್ಯರ್ ಅವರ ನಡೆ ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com