ಜಾಧವ್ ಗೆ ಪಾಕಿಸ್ತಾನದಿಂದ ಚಿತ್ರ ಹಿಂಸೆ? ಕುಟುಂಬಸ್ಥರೊಂದಿಗಿನ ಭೇಟಿ ವೇಳೆಯ ಫೋಟೊ, ವಿಡಿಯೋದಿಂದ ಬಹಿರಂಗ!

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ನನ್ನು ಬೇಹುಗಾರಿಕೆಯ ಆರೋಪದಡಿ ಬಂಧಿಸಿರುವ ಪಾಕಿಸ್ತಾನ ಅವರಿಗೆ ಚಿತ್ರ ಹಿಂಸೆ ಕೊಟ್ಟಿತ್ತೇ?
ಕುಲಭೂಷಣ್ ಜಾಧವ್-ಕುಟುಂಬ ಸದಸ್ಯರ ಭೇಟಿ
ಕುಲಭೂಷಣ್ ಜಾಧವ್-ಕುಟುಂಬ ಸದಸ್ಯರ ಭೇಟಿ
Updated on: 
ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ನನ್ನು ಬೇಹುಗಾರಿಕೆಯ ಆರೋಪದಡಿ ಬಂಧಿಸಿರುವ ಪಾಕಿಸ್ತಾನ ಅವರಿಗೆ ಚಿತ್ರ ಹಿಂಸೆ ಕೊಟ್ಟಿತ್ತೇ? ಕುಲಭೂಷಣ್ ಜಾಧವ್-ಕುಟುಂಬ ಸದಸ್ಯರ ಭೇಟಿ ವೇಳೆಯ ಫೋಟೊ ಹಾಗೂ ವಿಡಿಯೋಗಳು ಇಂಥಹದ್ದೊಂದು ಹೀಗೊಂದು ಅನುಮಾನ ವ್ಯಕ್ತವಾಗುವಂತೆ ಮಾಡಿವೆ.  
ಒಂದೆಡೆ ಕುಲಭೂಷಣ್ ಜಾಧವ್ ಕುಟುಂಬ ಸದಸ್ಯರನ್ನು ಗ್ಲಾಸ್ ಗಳ ಪರದೆ ಮಧ್ಯೆ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರೆಂಬ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಬೆನ್ನಲ್ಲೇ, ಕುಲಭೂಷಣ್ ಜಾಧವ್ ಅವರ ಫೋಟೋಗಳನ್ನು ಗಮನಿಸಿದವರು ಜಾಧವ್ ಅವರ ಬುರುಡೆಗೆ ಮೂಗೇಟು ಬಿದ್ದಿದ್ದು, ಕಿವಿ ಭಾಗದಲ್ಲಿ ಛೇದನ ಮಾಡಲಾಗಿದ್ದು ಕುಲಭೂಷನ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೂ ಮುನ್ನ ಪಾಕಿಸ್ತಾನದ ಜೈಲಿನಲ್ಲಿ ಚಿತ್ರ ಹಿಂಸೆ ನೀಡಲಾಗಿತ್ತೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.  
ಜಾಧವ್ ಅವರ ತೂಕ ಕಡಿಮೆಯಾಗಿದೆ. ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಮೂಗೇಟು ಬಿದ್ದಿರುವ ಗುರುತುಗಳಿವೆ ಹಾಗೂ ಕಿವಿ ಭಾಗದಲ್ಲಿ ಛೇದನ ಮಾಡಲಾಗಿರುವ ಗುರುತಿದೆ ಎಂಬ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com