ಜಾದವ್ ಭೇಟಿ ಬಳಿಕ ಭಾರತಕ್ಕೆ ಮರಳಿರುವ ಜಾದವ್ ತಾಯಿ ಆವಂತಿ ಯಾದವ್ ಮತ್ತು ಪತ್ನಿ ಚೇತನಾ ಜಾದವ್ ಖಿನ್ನತೆಗೆ ಒಳಗಾಗಿದ್ದು, ಪಾಕಿಸ್ತಾನ ಅವರನ್ನು ನಡೆಸಿಕೊಂಡ ರೀತಿ ಅವರಿಗೆ ಆಘಾತವನ್ನುಂಟು ಮಾಡಿದೆ. ಈ ಘಟನೆಯಿಂದಾಗಿ ನಮಗೆ ನಿಜಕ್ಕೂ ಆಘಾತವಾಗಿದ್ದು, ಪಾಕಿಸ್ತಾನದ ಅಧಿಕಾರಿಗಳು ಮಾನವೀಯತೆ ತೋರುವ ನೆಪದಲ್ಲಿ ತಮ್ಮ ಕ್ರೂರತೆಯನ್ನು ತೋರಿದ್ದಾರೆ. ಇದು ಅಂತಾರಾಷ್ಟ್ರೀಯ ವಿಚಾರವಾಗಿದ್ದು ಈ ಬಗ್ಗೆ ನಾನು ಹೆಚ್ಚು ಏನನ್ನೂ ಹೇಳಲಿಚ್ಛಿಸುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಜಾದವ್ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.