ನವದೆಹಲಿ: ಪಶ್ಚಿಮ ಆಫ್ರಿಕಾ ರಾಷ್ಟ್ರವಾದ ಟೊಗೊದಲ್ಲಿ ಕಾರಾಗೃಹದಲ್ಲಿದ್ದ ಕೇರಳ ಮೂಲದ ಐವರು ಭಾರತೀಯರು ಬಿಡುಗಡೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಅವರ ಬಿಡುಗಡೆಗೆ ಭಾರತೀಯ ಮಿಷನ್ ಮತ್ತು ದೂತಾವಾಸಗಳ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಅವರು, ಟೊಗೊದ ಜೈಲಿನಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಭಾರತೀಯರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ನಾವು ಸಫಲರಾಗಿದ್ದೇವೆ. ಅಕ್ರಾದಲ್ಲಿನ ಭಾರತೀಯ ಮಿಷನ್ ಮತ್ತು ಟೊಗೊದ ದೂತವಾಸಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವ್ಯಾಪಾರಿ ನೌಕಾಪಡೆಯಲ್ಲಿ ಉದ್ಯೋಗದಲ್ಲಿದ್ದ ಐವರು ಭಾರತೀಯರನ್ನು 2013ರಲ್ಲಿ ಟೊಗೊದ ತೀರಭಾಗದಲ್ಲಿ ಕಡಲ್ಗಳ್ಳತನ ದಾಳಿಯಲ್ಲಿ ಭಾಗಿಯಾಗಿದ್ದರ ಶಂಕೆಯ ಮೇಲೆ ಬಂಧಿತರಾಗಿದ್ದರು. ಅವರು ಬಂಧಿತರಾಗುವ ವೇಳೆಗೆ ಮುಂಬೈಯಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು.
We have secured the release of 5 Indians from Kerala jailed in Togo. Good work by Indian mission in Accra and Consulate in Togo.