

ಚೆನ್ನೈ: ಸಾಕಷ್ಟು ವಿರೋಧ ಹಾಗೂ ಗದ್ದಲದ ನಡುವೆಯೂ ಪ್ರಸಕ್ತ ಸಾಲಿನ ಬಜೆಟ್ ನ್ನು ಕೇಂದ್ರ ಸರ್ಕಾರ ಮಂಡನೆ ಮಾಡಿತ್ತು. ಇದೀಗ ಈ ಬಜೆಟ್'ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದ್ದು, ತಮಿಳುನಾಡು ರಾಜ್ಯದ ಕಾಂಗ್ರೆಸ್ ಪಕ್ಷ ಕೇಂದ್ರದ ಬಜೆಟ್'ಗೆ ಶುಕ್ರವಾರ ವಿರೋಧ ವ್ಯಕ್ತಪಡಿಸಿದೆ.
ಕೇಂದ್ರದ ಬಜೆಟ್ ಕುರಿತಂದೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ತಿರುನಾವುಕ್ಕರಸರ್ ಅವರು, ಎರಡು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಏಮ್ಸ್ ಆಸ್ಪತ್ರೆಯನ್ನು ಸ್ಥಾಪಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಜಾರ್ಖಾಂಡ್ ಮತ್ತು ಗುಜರಾತ್ ನಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಕೇಂದ್ರ ಘೋಷಣೆ ಮಾಡಿದೆ. ಈ ಬಾರಿಯ ಬಜೆಟ್ ಜನಪರವಾಗಿರಲಿಲ್ಲ. ಜನರಿಗೆ ಮೋಸ ಮಾಡಿದ್ದಾರೆ. ನಿಜಕ್ಕೂ ಈ ಬಾರಿಯ ಬಜೆಟ್ ಬೇಸರವನ್ನು ತಂದಿದೆ ಎಂದು ಹೇಳಿದ್ದಾರೆ.
ಆ ಬಾರಿಯ ಬಜೆಟ್ ರೈತ ವಿರೋಧಿಯಾಗಿದ್ದು, ಬಡವರ, ದಲಿತರ ಹಾಗೂ ಯುವಕರ ವಿರುದ್ಧವಾಗಿದೆ. ದೇಶ ಇಂದು ಗಂಭೀರವಾಗ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತಮಿಳುನಾಡು ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ರಾಜ್ಯದಲ್ಲಿ 2000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ಕೇಂದ್ರ ಬಜೆಟ್ ನಲ್ಲಿ ರೈತರಿಗಾಗಿ ಯಾವ ಘೋಷಣೆಗಳನ್ನೂ ಮಾಡಿಲ್ಲ. ಕೋಟಿಯಷ್ಟು ಯುವಕರು ಇಂದು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೂ ಬಜೆಟ್ ನಿಂದ ಯಾವ ಪ್ರಯೋಜನೆಗಳೂ ಇಲ್ಲ.
ಕಳೆದ ಬಾರಿಯ ಬಜೆಟ್ ನಲ್ಲಿ ಕೇಂದ್ರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ರೂ.47,600 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಆದರೆ, ಈ ಬಾರಿ ರೂ.48,000 ಕೋಟಿ ಹಣವನ್ನು ಮೀಸಲಿಟ್ಟಿದೆ. ಕೇವಲ 400 ಹಣವನ್ನಷ್ಟೇ ಕೇಂದ್ರ ಏರಿಕೆ ಮಾಡಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಈ ಹಿಂದೆ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದರು ದಿನಗೂಲಿ ವೇತನವನ್ನು ರೂ.150 ರಿಂದ 300ಕ್ಕೆ ಏರಿಕೆ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೇ ಬಜೆಟ್ ನ್ನು ಸೇರ್ಪಡೆಗೊಳಿಸುವ ಅಗತ್ಯವಿರಲಿಲ್ಲ ಎಂದು ತಿರುನಾವುಕ್ಕರಸರ್ ಅವರು ತಿಳಿಸಿದ್ದಾರೆ.