ಚೆನ್ನೈ: ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಸಾಂಪ್ರದಾಯಿಕ ಕ್ರೀಡೆ ಮೂರು ವರ್ಷಗಳ ನಂತರ ಉತ್ಸಾಹದಿಂದ ಆರಂಭವಾಗಿದೆ.
1200 ಕೋಣಗಳು, 950 ಎತ್ತುಗಳು ಸ್ಪರ್ಧೆಗೆ ಆಗಮಿಸಿದ್ದು 15 ವೈದ್ಯಕೀಯ ತಂಡ, 20 ಆಂಬ್ಯುಲೆನ್ಸ್ ಗಳನ್ನು ಸುರಕ್ಷತೆಗೆ ವೈದ್ಯಕೀಯ ಚಿಕಿತ್ಸೆಗೆ ನಿಯೋಜಿಸಲಾಗಿದೆ.
ಈ ಮಧ್ಯೆ, ಮಧುರೈನ ಅಲಂಗನಲ್ಲೂರಿನಲ್ಲಿ ಮುಂದಿನ ಶುಕ್ರವಾರ ಕ್ರೀಡೆ ನಡೆಯಲಿದ್ದು ತಯಾರಿ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ನಿಷೇಧ ಹೇರಿ ನಿಂತು ಹೋಗಿದ್ದ ಜಲ್ಲಿಕಟ್ಟು ಕ್ರೀಡೆ ಈ ವರ್ಷ ತಮಿಳುನಾಡು ಸರ್ಕಾರದ ಸುಗ್ರೀವಾಜ್ಞೆಯಿಂದ ಪುನರಾರಂಭಗೊಂಡಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವುದರಿಂದ ಆಯೋಜಕರು ಆಕರ್ಷಣೀಯ ಬಹುಮಾನಗಳನ್ನು ಗೆದ್ದವರಿಗೆ ನೀಡುತ್ತಿದ್ದಾರೆ.
ಜಲ್ಲಿಕಟ್ಟು ಕ್ರೀಡೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಕ್ರೀಡೆಗೆ ಅವಕಾಶ ಮಾಡಿಕೊಟ್ಟದ್ದಕ್ಕೆ ತಮಿಳುನಾಡು ಭಾರತೀಯ ಜನತಾ ಪಕ್ಷ ಧನ್ಯವಾದ ಸಲ್ಲಿಸಿದೆ.