ಕಾಶ್ಮೀರದಲ್ಲಿ ಪಾಕಿಸ್ತಾನ ಭಾಗದಿಂದ ಕೊರೆದ ಬೃಹತ್‌ ಸುರಂಗ ಪತ್ತೆ ಹಚ್ಚಿದ ಬಿಎಸ್‌ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಉಗ್ರರು ನುಸುಳಲು ಪಾಕಿಸ್ತಾನದಕಡೆಯಿಂದ ಕೊರೆದಿರುವ...
ಪತ್ತೆಯಾದ ಸುರಂಗ
ಪತ್ತೆಯಾದ ಸುರಂಗ
Updated on: 
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಉಗ್ರರು ನುಸುಳಲು ಪಾಕಿಸ್ತಾನದಕಡೆಯಿಂದ ಕೊರೆದಿರುವ 20 ಮೀಟರ್ ಉದ್ದದ ಬೃಹತ್ ಸುರಂಗವನ್ನು ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್ಎಫ್) ಮಂಗಳವಾರ ಪತ್ತೆ ಮಾಡಿದೆ.
ಸೋಮವಾರ ರಾಮಗಢ ಪ್ರದೇಶದ ಗಡಿಯಲ್ಲಿ ಭೂಮಿಯಲ್ಲಿ ಕೊರೆದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಮಣ್ಣನ್ನು ಅಗೆದು ನೋಡಿದಾಗ ಬೃಹತ್‌ ಸರಂಗ ಪತ್ತೆಯಾಗಿದೆ. ಗಡಿಯಲ್ಲಿನ ತಂತಿ ಬೇಲಿಯ ಕೆಳಗೆ 20 ಮೀಟರ್‌ ಉದ್ದದ ಸುರಂಗವನ್ನು ಪತ್ತೆ ಮಾಡಲಾಗಿದೆ ಎಂದು ಬಿಎಸ್‌ಎಫ್‌ನ ಡಿಐಜಿ ಧರ್ಮೇಂದ್ರ ಪರೀಖ್‌ ಅವರು ತಿಳಿಸಿದ್ದಾರೆ.
2.5 ಅಡಿ ಅಗಲ, 2.5 ಅಡಿ ಎತ್ತರ ವಿರುವ 20 ಅಡಿ ಉದ್ದದ ಸುರಂಗ ಇದಾಗಿದೆ. ಸುರಂಗ ಪತ್ತೆ ಮಾಡುವ ಮೂಲಕ ಗಡಿಯಲ್ಲಿ ಪಾಕಿಸ್ತಾನಿ ಉಗ್ರರು ನುಸುಳುವುದಕ್ಕೆ ತಡೆಯೊಡ್ಡಿದಂತಾಗಿದೆ. ಪಾಕಿಸ್ತಾನದ ಕಡೆಯಿಂದ ಈ ಸುರಂಗ ಕೊರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸುರಂಗ ಇನ್ನೂ ಪೂರ್ಣಗೊಳ್ಳುವ ಮತ್ತು ಗಡಿಯಲ್ಲಿನ ಬೇಲಿಯನ್ನು ತಲುಪುವ ಮೊದಲೇ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com