ರುವಾಂಡಾ ಮತ್ತು ಉಗಾಂಡಾ ದೇಶಗಳ ಭೇಟಿಗೆ ತೆರಳಲಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ರುವಾಂಡ ಮತ್ತು ಉಗಾಂಡ ದೇಶಗಳ 5 ದಿನಗಳ ಭೇಟಿಗಾಗಿ ಇಂದು...
ಹಮೀದ್ ಅನ್ಸಾರಿ
ಹಮೀದ್ ಅನ್ಸಾರಿ
Updated on
ನವದೆಹಲಿ:  ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ರುವಾಂಡ ಮತ್ತು ಉಗಾಂಡ ದೇಶಗಳ 5 ದಿನಗಳ ಭೇಟಿಗಾಗಿ ಇಂದು ಪ್ರಯಾಣ ಆರಂಭಿಸಲಿದ್ದಾರೆ. ಆಫ್ರಿಕಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ  ಸಂಬಂಧಗಳನ್ನು ಬೆಳೆಸುವ ಪ್ರಯತ್ನ ಇದಾಗಿದೆ. 
ದ್ವಿಪಕ್ಷೀಯ ಹಿತಾಸಕ್ತಿಗಳ ವಿಷಯಗಳ ಕುರಿತು ಉಪ ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಅವರೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ವಿಜಯ್ ಸಂಪ್ಲಾ ಹಾಗೂ ನಾಲ್ವರು ಸಂಸತ್ ಸದಸ್ಯರು ಮತ್ತು ಅಧಿಕಾರಿಗಳು ತೆರಳಲಿದ್ದಾರೆ. ಪೂರ್ವ ಆಫ್ರಿಕಾ ರಾಷ್ಟ್ರಗಳು ಮತ್ತು ಭಾರತದ ಜೊತೆ
ಸಮಕಾಲೀನ ಸಂಬಂಧವನ್ನು ಬೆಳೆಸಲು ಉಪರಾಷ್ಟ್ರಪತಿಗಳ ಈ ಭೇಟಿ ಸಹಕಾರಿಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com