ಬಜೆಟ್ ದಿನಾಂಕ ಮುಂದೂಡಿ: ಚುನಾವಣಾ ಆಯೋಗಕ್ಕೆ ವಿಪಕ್ಷಗಳ ಮನವಿ

ಚುನಾವಣೆ ದಿನಾಂಕದ ಆಸುಪಾಸಿನಲ್ಲೇ ಬಜೆಟ್ ದಿನಾಂಕವನ್ನು ನಿಗದಿ ಮಾಡಿರುವುದಕ್ಕಿ ವಿರೋಧ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿದ್ದು, ಬಜೆಟ್ ದಿನಾಂಕವನ್ನು ಬದಲು ಮಾಡುವಂತೆ ಕೋರಿ ವಿರೋಧ ಪಕ್ಷಗಳು ಗುರುವಾರ ಚುನಾವಣಾ ಆಯೋಗವನ್ನು...
ವಿರೋಧಪಕ್ಷಗಳ ನಾಯಕರು (ಸಂಗ್ರಹ ಚಿತ್ರ)
ವಿರೋಧಪಕ್ಷಗಳ ನಾಯಕರು (ಸಂಗ್ರಹ ಚಿತ್ರ)
Updated on: 

ನವದೆಹಲಿ: ಚುನಾವಣೆ ದಿನಾಂಕದ ಆಸುಪಾಸಿನಲ್ಲೇ ಬಜೆಟ್ ದಿನಾಂಕವನ್ನು ನಿಗದಿ ಮಾಡಿರುವುದಕ್ಕಿ ವಿರೋಧ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿದ್ದು, ಬಜೆಟ್ ದಿನಾಂಕವನ್ನು ಬದಲು ಮಾಡುವಂತೆ ಕೋರಿ ವಿರೋಧ ಪಕ್ಷಗಳು ಗುರುವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿವೆ.

ತೃಣಮೂಲ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ ಪಕ್ಷ, ರಾಷ್ಟ್ರೀಯ ಜನತಾದಳ ಪಕ್ಷ ಹಾಗೂ ಇನ್ನಿತರೆ ವಿರೋಧಗಳು ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಕೇಂದ್ರ ಬಜೆಟ್ ದಿನಾಂಕವನ್ನು ಬದಲು ಮಾಡುವಂತೆ ಮನವಿ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.

ವಿರೋಧ ಪಕ್ಷಗಳ 11 ಸದಸ್ಯರ ತಂಡ ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಬಜೆಟ್ ದಿನಾಂಕವನ್ನು ಚುನಾವಣೆ ಬಳಿಕ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗದ ಬಳಿ ಮನವಿ ಮಾಡಿಕೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಡೆರೆಕ್ ಒಬ್ರೇನ್ ಅವರು, ನಮ್ಮ ಬಳಿ ಸುಲಭವಾದ ಸಲಹೆಯಿದೆ. ಮಾರ್ಚ್ 8 ರ ಬಳಿಕ ಕೇಂದ್ರ ತನ್ನ ಬಜೆಟ್ ನ್ನು ಮಂಡಿಸಲಿ. ಮಾರ್ಚ್ 31ರ ಒಳಗಾಗಿ ಚಾಲನೆಗೆ ತರಲಿ. ಮಾರ್ಚ್ 8 ರ ಎಲ್ಲಾ ಪಂಚರಾಜ್ಯಗಳ ಚುನಾವಣೆ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಟಿಎಂಸಿ ನಾಯಕರು ಹಾಗೂ ಇನ್ನಿತರೆ ಸದಸ್ಯರೂ ಕೂಡ ಬಜೆಟ್ ದಿನಾಂಕವನ್ನು ಮುಂದೂಡಲಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಮಾತನಾಡಿ, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಬಜೆಟ್ ದಿನಾಂಕವನ್ನು ಬದಲು ಮಾಡುವಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡಿಕೊಂಡಿದ್ದೇವೆ. ಈ ಬಾರಿಯ ಬಜೆಟ್ ನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡಲಾಗುತ್ತದೆ. ಇದು ನ್ಯಾಯಯುತ ಚುನಾವಣೆಗೆ ದಾರಿ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಮಾತನಾಡಿ, ಚುನಾವಣೆಗೂ ಮುನ್ನ ಬಜೆಟ್ ಮಂಡನೆ ಮಾಡುವುದರಿಂದ ಜನರನ್ನು ತಪ್ಪು ಹಾದಿಗೆ ಎಳೆದಂತಾಗುತ್ತದೆ. ಕೇಂದ್ರ ಬಜೆಟ್ ನ್ನು ದುರುಪಯೋಗಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಕೇಂದ್ರದ ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ನಿಗದಿ ಮಾಡಲಾಗಿದ್ದು, ಪಂಚ ರಾಜ್ಯಗಳ ಚುನಾವಣೆ ಫೆಬ್ರವರಿ 4ರಿಂದ ಆರಂಭವಾಗಲಿದೆ. ಚುನಾವಣೆಗೂ ಮುನ್ನ ಬಜೆಟ್ ಘೋಷಣೆ ಮಾಡಿದರೆ ಬಿಜೆಪಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿ ಜನರನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತದೆ ಎಂಬ ಕಾರಣಕ್ಕೆ ವಿರೋಧಗಳು ತನ್ನ ಭೀತಿಯನ್ನು ವ್ಯಕ್ತಪಡಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com