ಟಿಕೆಟ್ ಬುಕ್ಕಿಂಗ್ ಗಾಗಿ ಐಆರ್ ಸಿಟಿಸಿಯಿಂದ ಮುಂದಿನ ವಾರ ಹೊಸ ಆಪ್ ಬಿಡುಗಡೆ

ಗ್ರಾಹಕರು ಅತಿ ವೇಗವಾಗಿ ಟಿಕೆಟ್ ಬುಕ್ ಮಾಡುವುದಕ್ಕಾಗಿ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗ್ರಾಹಕರು ಅತಿ ವೇಗವಾಗಿ ಟಿಕೆಟ್ ಬುಕ್ ಮಾಡುವುದಕ್ಕಾಗಿ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ)ಯು ಮುಂದಿನ ವಾರ ಹೊಸ ಆಪ್ ಬಿಡುಗಡೆ ಮಾಡಲು ಮುಂದಾಗಿದೆ.
ಐಆರ್ ಸಿಟಿಸಿ ಕನೆಕ್ಟ್ ಶೀಘ್ರದಲ್ಲಿ ಹೊಸ ಹೆಸರಿನೊಂದಿಗೆ ಮರು ಬಿಡುಗಡೆಯಾಗುತ್ತಿದ್ದು, ಐಆರ್ ಸಿಟಿಸಿ ಕನೆಕ್ಟ್ ಇನ್ನುಮುಂದೆ ಐಆರ್ ಸಿಟಿಸಿ ರೈಲ್ ಕನೆಕ್ಟ್ ಆಗಿ ಹೊಸ ಆಪ್ ನೊಂದಿಗೆ ಕಾಣಿಸಿಕೊಳ್ಳಲಿದೆ.
ಐಆರ್ ಸಿಟಿಸಿ ಮುಂದಿನ ವಾರ ಆಪ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ನೆಕ್ಸ್ ಜನರೇಷನ್ ಇ-ಟಿಕೆಟಿಂಗ್ ಸಿಸ್ಟಮ್ ಆಧಾರದ ಮೇಲೆ ಆಪ್ ಕಾರ್ಯನಿರ್ವಹಿಸಲಿದೆ. 
ಐಆರ್ ಸಿಟಿಸಿ ರೈಲ್ ಕನೆಕ್ಟ್ ಹೊಲ ಲಕ್ಷಣಗಳನ್ನು ಹೊಂದಿದ್ದು, ಸೇವಡ್ ಪ್ಯಾಸೆಂಜರ್ ಗಳ ವಿವರ, ಪ್ರಯಾಣದ ಮುನ್ಸೂಚನೆಯನ್ನು ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com