ಅಖಿಲೇಶ್ ಅವರಿಗೇ 'ಸೈಕಲ್' ಚಿಹ್ನೆ ನೀಡಿ: ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದ ಮಕ್ಕಳು

ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಿನ್ನಲೆಯಲ್ಲಿ ಪಕ್ಷದ ಎಂಎಲ್'ಎ ಗಳು ಹಾಗೂ ಎಂಎಲ್ ಸಿಗಳು ಒಂದೆಡೆ ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅನಿರೀಕ್ಷಿತ ಭಾಗಗಳಿಂದಲೂ ಅಖಿಲೇಶ್ ಗೆ ಬೆಂಬಲಗಳು...
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
Updated on: 

ಲಖನೌ: ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಿನ್ನಲೆಯಲ್ಲಿ ಪಕ್ಷದ ಎಂಎಲ್'ಎ ಗಳು ಹಾಗೂ ಎಂಎಲ್ ಸಿಗಳು ಒಂದೆಡೆ ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅನಿರೀಕ್ಷಿತ ಭಾಗಗಳಿಂದಲೂ ಅಖಿಲೇಶ್ ಗೆ ಬೆಂಬಲಗಳು ವ್ಯಕ್ತವಾಗತೊಡಗಿವೆ.

ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹತ್ತಿರಬರುತ್ತಿರುವಂತೆಯೇ ಸಮಾಜವಾದಿ ಪಕ್ಷದಲ್ಲಿ ಅಪ್ಪ ಮಗನ ಜಗಳ ದೊಡ್ಡ ಬಿರುಕು ಸೃಷ್ಟಿಯಾಗಿದೆ. ಮುಲಾಯಂ ಹಾಗೂ ಅಖಿಲೇಶ್ ಅವರು 'ಸೈಕಲ್' ಚಿಹ್ನೆಗಾಗಿ ಸೆಣೆಸಾಡುತ್ತಿದ್ದು, ಇಬ್ಬರೂ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

 ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಅಖಿಲೇಶ್ ಅವರಿಗೆ ಮಕ್ಕಳ ಬೆಂಬಲ ಕೂಡ ವ್ಯಕ್ತವಾಗುತ್ತಿದ್ದು, ಸೈಕಲ್ ಚಿಹ್ನೆಯನ್ನು ಅಖಿಲೇಶ್ ಯಾದವ್ ಅವರಿಗೇ ನೀಡುವಂತೆ ಬಾಲಕಿಯೊಬ್ಬಳು ತನ್ನ ರಕ್ತದಲ್ಲಿ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾನೆ.

ಘಾಜಿಯಾಬಾದ್ ಮೂಲದ ಸಹೋದರ ಹಾಗೂ ಸಹೋದರಿಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಸೈಕಲ್ ಚಿಹ್ನೆಯನ್ನು ಅಖಿಲೇಶ್ ಅವರಿಗೇ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

ಸನಾ (15) 10ನೇ ತರಗತಿ ಓದುತ್ತಿರುವ ಬಾಲಕಿ ಹಾಗೂ 2ನೇ ತರಗತಿ ಓದುತ್ತಿರುವ ಈಕೆಯ ಸಹೋದರ ಅಜೀಮ್ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ. ಸೈಕಲ್ ಚಿಹ್ನೆಯನ್ನು ಅಖಿಲೇಶ್ ಅವರಿಗೇ ನೀಡಲಿಲ್ಲ ಎಂದರೆ ನಾವು ಸತ್ತುಹೋಗುತ್ತೇವೆಂದು ಮಕ್ಕಳು ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ಮುಲಾಯಂ ಅವರ ಕುರಿತಂತೆಯೂ ಮಕ್ಕಳು ಹೇಳಿಕೊಂಡಿದ್ದು, ಪಕ್ಷದ ಜವಾಬ್ದಾರಿಯನ್ನು ಇಬ್ಬರು ಮಕ್ಕಳಿಗೆ ವಹಿಸುವಂತೆ ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಈ ಪತ್ರವನ್ನು ಚುನಾವಣಾ ಆಯೋಗಕ್ಕೆ ನೀಡಲು ಹೋದಾಗ ಮಕ್ಕಳನ್ನು ತಡೆದಿರುವ ಅವರ ತಂದೆ ಬುದ್ಧಿವಾದ ಹೇಳಿದ್ದಾರೆ.

ಪತ್ರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಕ್ಕಳ ತಂದೆ, ಸಾರ್ವಜನಿಕ ಕಾರ್ಯಕ್ರಮಗಳು ಬಂದಾಗ ಮಕ್ಕಳಿಬ್ಬರು ಮುಖ್ಯಮಂತ್ರಿ ಅಖಿಲೇಶ್ ಹಾಗೂ ಸಮಾಜವಾದಿ ಪಕ್ಷದ ಕುರಿತು ಪದ್ಯಗಳನ್ನು ಬರೆಯುತ್ತಿದ್ದರು. ಆಡಳಿತ ಮಂಡಳಿಯ ಗಮನ ಸೆಳೆಯುವ ಸಲುವಾಗಿ ಇದೇ ರೀತಿಯಲ್ಲಿ ಮಗುವೊಂದು ಸರ್ಕಾರಕ್ಕೆ ಪತ್ರ ಬರೆದಿತ್ತು. ಪತ್ರಿಕೆಗಳ ವರದಿಯಿಂದ ಪ್ರೇರಣೆಗೊಂಡು ಮಕ್ಕಳು ಈ ರೀತಿ ಮಾಡಿದ್ದಾರೆ. ಇದಲ್ಲದೆ, ಸನಾ ಮತ್ತು ಅಜೀಮ್'ಗೆ ಅಖಿಲೇಶ್ ಬಹಳ ಇಷ್ಟ. ಏಕೆಂದರೆ, ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ಜಾರಿಗೆ ತಂದಿದ್ದರಿಂದ ಅವರನ್ನು ಬಹಳ ಇಷ್ಟಪಡುತ್ತಾರೆಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com