ಇಂಫಾಲದಲ್ಲಿ ಪ್ರಬಲ ಬಾಂಬ್ ಸ್ಫೋಟ: ಇಬ್ಬರು ಸಿಆರ್'ಪಿಎಫ್ ಯೋಧರಿಗೆ ಗಾಯ

ಪಶ್ಚಿಮ ಇಂಫಾಲದಲ್ಲಿರುವ ಉಪ ಆಯುಕ್ತರ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ಇಬ್ಬರು ಸಿಆರ್'ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಇಂಫಾಲ: ಪಶ್ಚಿಮ ಇಂಫಾಲದಲ್ಲಿರುವ ಉಪ ಆಯುಕ್ತರ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ಇಬ್ಬರು ಸಿಆರ್'ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ನಿನ್ನೆ ಸಂಜೆ 6.20ರ ಸುಮಾರಿಗೆ ಯೋಧರು ತಾವು ಉಳಿದುಕೊಂಡಿದ್ದ ಮನೆಯಿಂದ ಪೊಲೀಸ್ ಆಯುಕ್ತ ಕಚೇರಿ ಬಳಿ ಬರುತ್ತಿದ್ದರು. ಲಂಫೇಲ್'ಪತ್ ಬಳಿ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಪ್ರಬಲ ಬಾಂಬ್ ವೊಂದು ಸ್ಫೋಟಗೊಂಡಿತ್ತು. ಈ ವೇಳೆ ಯೋಧರಿಗೆ ಗಾಯಗಳಾಗಿವೆ ಎಂದು ಪಶ್ಚಿಮ ಇಂಫಾಲ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎನ್ ಹೆರೊಜಿತ್ ಅವರು ಹೇಳಿದ್ದಾರೆ.

ಯೋಧರು ಕರ್ತವ್ಯನಿರತರಾಗಿರಲಿಲ್ಲ. ಪ್ರಸ್ತುತ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಗ್ರರು ಐಇಡಿ ಅಡಗಿಸಿಟ್ಟು ಸ್ಫೋಟಿಸಿದ್ದಾರೆಂದು ಶಂಕೆಗಳು ವ್ಯಕ್ತವಾಗುತ್ತಿವೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com