6 ತಿಂಗಳ ನಂತರ ಗುಜರಾತ್ ಗೆ ಮರಳಿದ ಹಾರ್ದಿಕ್ ಪಟೇಲ್

ಸುಮಾರು 6 ತಿಂಗಳ ನಂತರ ಪಟೇಲ್ ಮೀಸಲಾತಿ ನಾಯಕ ಹಾರ್ದಿಕ್ ಪಟೇಲ್ ಅವರು ಮಂಗಳವಾರ ತವರು ರಾಜ್ಯ ಗುಜರಾತ್ ಗೆ ಮರಳಿದ್ದು,
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Updated on: 
ಅಹಮದಾಬಾದ್: ಸುಮಾರು 6 ತಿಂಗಳ ನಂತರ ಪಟೇಲ್ ಮೀಸಲಾತಿ ನಾಯಕ ಹಾರ್ದಿಕ್ ಪಟೇಲ್ ಅವರು ಮಂಗಳವಾರ ತವರು ರಾಜ್ಯ ಗುಜರಾತ್ ಗೆ ಮರಳಿದ್ದು, ರಾಜಸ್ಥಾನ ಗಡಿಯಲ್ಲಿರುವ ರತ್ನಪುರದಲ್ಲಿ ಅವರ ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದರು.
ಉದಯಪುರದಲ್ಲಿದ್ದ 23 ವರ್ಷದ ಯುವ ನಾಯಕ ಹಾರ್ದಿಕ್ ಪಟೇಲ್ ಅವರು ಇಂದು ನಾಲ್ಕು ವಾಹನಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಗುಜರಾತ್ ಗೆ ತೆರಳಿದ್ದಾರೆ ಎಂದು ಈ ಮುಂಚೆ ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.
ತವರು ರಾಜ್ಯಕ್ಕೆ ಮರಳಿದ ಹಾರ್ದಿಕ್ ಪಟೇಲ್ ಅವರನ್ನು ಪಟೇಲ್ ಸಮುದಾಯದ ನೂರಾರು ಯುವಕರು ರತ್ನಪುರ ಗಡಿಯಲ್ಲಿ ಇಂದು ಮಧ್ಯಾಹ್ನ ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಹಾರ್ದಿಕ್ ಪಟೇಲ್, ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಲು ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಹಾರ್ದಿಕ್ ಪಟೇಲ್ ಅವರು ರತ್ನಪುರದಿಂದ ಸಬರಕಾಂತ್ ಜಿಲ್ಲೆಯ ಹಿಮಂತನಗರಕ್ಕೆ ತೆರಳಿ, ಅಲ್ಲಿ ಪಟೇಲ್ ಸಮುದಾಯದ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com