ಬಿಜೆಪಿ, ಕಾಂಗ್ರೆಸ್ ನಿಂದ ಲಂಚ ಪಡೆದು ಆಪ್ ಗೆ ಮತ ಹಾಕಿ: ಕೇಜ್ರಿವಾಲ್ ಹೇಳಿಕೆಗೆ ಆಯೋಗ ಛೀಮಾರಿ

ಗೋವಾ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಹಣ ಪಡೆದುಕೊಂಡು ಆಮ್ ಆದ್ಮಿ ಪಕ್ಷಕ್ಕೆ ಮತ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 
ನವದೆಹಲಿ: ಗೋವಾ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಹಣ ಪಡೆದುಕೊಂಡು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿರುವ ಹೇಳಿಕೆಗೆ ಚುನಾವಣಾ ಆಯೋಗ ಖಂಡಿಸಿದೆ.ಅಲ್ಲದೆ ನೊಟೀಸ್ ಜಾರಿ ಮಾಡಿ ಉತ್ತರಿಸುವಂತೆ ಆದೇಶಿಸಿದೆ.
ಈ ತಿಂಗಳ ಆರಂಭದಲ್ಲಿ ಗೋವಾದ ಬೆನೌಲಿಮ್ ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿಗಳು ಹಣ  ನೀಡಿದರೆ ಅದನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ  ಹಣವೆಂದೇ ಸ್ವೀಕರಿಸಿ. ಆದರೆ ಮತ ಚಲಾಯಿಸುವ ಸಂದರ್ಭದಲ್ಲಿ ಆಪ್ ಅಭ್ಯರ್ಥಿ ಪರ ಮತ ಚಲಾಯಿಸಿ ಎಂದು ಹೇಳಿದ್ದರು. 
ಇವರ ಹೇಳಿಕೆಯನ್ನು ಚುನಾವಣಾ ಆಯೋಗ ತೀವ್ರವಾಗಿ ಆಕ್ಷೇಪಿಸಿದೆ. ಚುನಾವಣಾ ಆಯೋಗದ ಆದೇಶವನ್ನು ತಪ್ಪು ಎಂದು ಹೇಳಿರುವ ಕೇಜ್ರಿವಾಲ್, ಕೋರ್ಟ್ ನಲ್ಲಿ ಅದನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. 
''ನನ್ನ ವಿರುದ್ಧ ಚುನಾವಣಾ ಆಯೋಗ ನೀಡಿರುವ ತೀರ್ಪು ಸಂಪೂರ್ಣ ತಪ್ಪು. ಕೆಳ ನ್ಯಾಯಾಲಯ ನನ್ನ ಪರ ತೀರ್ಪು ನೀಡಿದೆ. ಚುನಾವಣಾ ಆಯೋಗ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿದೆ. ಇತ್ತೀಚಿನ ಆಯೋಗದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ಹೇಳಿದೆ.
ಕೇಜ್ರಿವಾಲ್ ಅವರು ಗೋವಾದಲ್ಲಿ ಜನವರಿ 4ರಂದು ಚುನಾವಣಾ ಪ್ರಚಾರ ವೇಳೆ ನೀಡಿದ ಹೇಳಿಕೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ದೆಹಲಿ ಮುಖ್ಯಮಂತ್ರಿಯವರ ಹೇಳಿಕೆ ಲಂಚ ಸ್ವೀಕರಿಸಲು ಪ್ರಚೋದನೆ ನೀಡಿದಂತಾಗುತ್ತದೆ. ಕೇಜ್ರಿವಾಲ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. 
ಕೇಜ್ರಿವಾಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಕೂಡ ಒತ್ತಾಯಿಸಿತ್ತು. ಇದು ಮತದಾರರ ಸೂಕ್ಷ್ಮ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿದಂತೆ ಆಗುತ್ತದೆ ಎಂದು ಗೋವಾದ ಕಾಂಗ್ರೆಸ್ ವಕ್ತಾರ ತ್ರಜನೊ ಡಿ ಮೆಲ್ಲೊ ತಿಳಿಸಿದ್ದರು.
ಮಾಜಿ ಮಹಾ ನಿರ್ದೇಶಕ ಎಲ್ವಿಸ್ ಗೊಮ್ಸ್ ಅವರನ್ನು ಆಮ್ ಆದ್ಮಿ ಪಕ್ಷ ಗೋವಾದಲ್ಲಿ ಮುಖ್ಯಮಂತ್ರಿ ಕಣಕ್ಕಿಳಿಸಿದೆ. ಅಲ್ಲಿ ಫೆಬ್ರುವರಿ 4ರಂದು ಮತದಾನ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com