ಪಣಜಿ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ, ಗೋವಾವನ್ನು ಭಾರತದ ಅತಿ ಅನುಕೂಲಕರ ವಾದ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಣಜಿಯಲ್ಲಿ ನಡೆದ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗಿಂತ ಗೋವಾ ವಿವಿಧ ವಲಯಗಳಲ್ಲಿ ಶೀಘ್ರ ಅಭಿವೃದ್ಧಿ ಹೊಂದಿದ್ದು, ವಿಭಿನ್ನವಾಗಿ ನಿಂತಿದೆ ಎಂದು ಮೋದಿ ತಿಳಿಸಿದ್ದಾರೆ.
1990 ರಿಂದ 2000 ದವರೆಗೆ ಗೋವಾ ರಾಜಕೀಯವಾಗಿ ಅಸ್ಥಿರವಾಗಿತ್ತು. ಆದರೆ ಅದರ ನಡುವೆಯೂ ಗೋವಾ ಅಭಿವೃದ್ಧಿಯಲ್ಲಿ ಮುಂದುವರಿದಿದೆ, ಗೋವಾ ಅಭಿವೃದ್ಧಿಯನ್ನು ನಾನು ದೆಹಲಿಯಿಂದ ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ 5 ವರ್ಷಗಳಲ್ಲಿ ಗೋವಾ ಸರ್ಕಾರದ ಅಭಿವೃದ್ಧಿಗಾಗಿ ಜನರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.