ಉತ್ತರ ಪ್ರದೇಶ ಚುನಾವಣೆ: 23 ಕೋಟಿ ಆಸ್ತಿಯ ಒಡತಿ ಅಪರ್ಣಾ ಯಾದವ್ ಶ್ರೀಮಂತ ಅಭ್ಯರ್ಥಿ!

ಅಪರ್ಣಾ ಯಾದವ್ 23 ಕೋಟಿ ಆಸ್ತಿಯನ್ನು ಹೊಂದಿದ್ದು ಚುನಾವಣಾ ಕಣದಲ್ಲಿರುವ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅಪರ್ಣಾ ಯಾದವ್
ಅಪರ್ಣಾ ಯಾದವ್
ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ 23 ಕೋಟಿ ಆಸ್ತಿಯನ್ನು ಹೊಂದಿದ್ದು ಚುನಾವಣಾ ಕಣದಲ್ಲಿರುವ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 
ಬಿಜೆಪಿಯ ಅಭ್ಯರ್ಥಿ ರೀಟಾ ಬಹುಗುಣ ಅವರ ವಿರುದ್ಧ ಸ್ಪರ್ಧಿಸಿರುವ ಅಪರ್ಣಾ ಯಾದವ್, ಆಸ್ತಿ ವಿವರಕ್ಕೆ ಸಂಬಂಧಿಸಿದಂತೆ ಜ.30 ರಂದು ಪ್ರಮಾಣ ಪತ್ರ ಸಲ್ಲಿಸಿದ್ದು, ತಮ್ಮ ಪತಿ ಪ್ರತೀಕ್ ಯಾದವ್ ಬಳಿ 5.23 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬರ್ಗಿನಿ ಕಾರು ಸೇರಿದಂತೆ ಇಬ್ಬರ ಬಳಿ ಒಟ್ಟು 22.95 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಹೇಳಿದ್ದಾರೆ. 
ಇನ್ನು ಅಪರ್ಣಾ ಬಳಿ 1.88 ಕೋಟಿ ರೂ ಮೊತ್ತದ ಚಿನ್ನಾಭರಣಗಳಿದ್ದು, ಪತಿ ಪ್ರತೀಕ್ ಯಾದವ್ ಮೂರು ವಿಮಾ ಪಾಲಿಸಿಗಳಲ್ಲಿ ಒಟ್ಟು 7.96 ಲಕ್ಷ ರೂಪಾಯಿಗಳನ್ನು ತೊಡಗಿಸಿದ್ದಾರೆ, ತಮ್ಮ ಬಳಿ ಒಟ್ಟು 3.27 ಕೋಟಿ ಚರಾಸ್ತಿ ಹಾಗೂ 12.5 ಲಕ್ಷ ಸ್ಥಿರಾಸ್ತಿ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com