ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ

ಚಲಿಸುತ್ತಿದ್ದ ಕಾರಿನಲ್ಲಿ 21 ವರ್ಷದ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ  21 ವರ್ಷದ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಆಗ್ನೇಯ ದೆಹಲಿಯ ಅಮರ್ ಕಾಲೋನಿಯಲ್ಲಿ ಜಾರ್ಖಂಡ್ ಮೂಲದ ಮಹಿಳೆ ಮೇಲೆ, ಆರಿಫ್ , ಮೆಹರ್ ಬನ್, ಮತ್ತು ವಿಜಯ್ ಎಂಬುವರು ಕಳೆದ ರಾತ್ರಿ ಚಲಿಸುತ್ತಿದ್ದ ವ್ಯಾಗನ್ -ಆರ್ ಕಾರಿನಲ್ಲಿ ಅತ್ಯಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11 ಗಂಟೆ ವೇಳೆಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಪರಿಚಯಸ್ಥರು ತನ್ನ ಮೇಲೆ ಅತ್ಯಾಚಾರ ನಡೆಸಿ ನಂತರ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾಗಿ ಮಹಿಳೆ ದೂರಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಮಹಿಳೆ ಉದ್ಯೋಗ ಅರಸಿ ಕಳೆದ ಒಂದು ತಿಂಗಳ ಹಿಂದೆ ದೆಹಲಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ವಾರಗಳ ಹಿಂದೆ ಆರೀಫ್ ಎಂಬಾತನ ಪರಿಚಯವಾಗಿದ್ದು, ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ.  ನಿನ್ನೆ ಒಂದು ಕೆಲಸ ಖಾಲಿಯಿದ್ದು, ಇಂಟರ್ ವ್ಯೂ ಗೆ ಬರುವಂತೆ ಆಕೆಗೆ ಕರೆ ಮಾಡಿದ್ದಾನೆ. ಈ ವೇಳೆ ಆಕೆ ಅವನ ಜೊತೆ ತೆರಳಿದಾಗ ಕಾರಿನಲ್ಲೇ ಅತ್ಯಾಚಾರ ನಡೆಸಿರುವುದಾಗಿ ಹೇಳಿದ್ದಾಳೆ. ಆರೀಫ್ ಕಾರು ಚಾಲಕನಾಗಿದ್ದು, ಮೆಹರ್ ಬನ್ ಪಾರ್ಕಿಂಗ್ ಅಟೆಂಡರ್ ಆಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com