ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಂಟ್ ಮುಲ್ಲಾದ ಸೇನಾ ಕ್ಯಾಂಪ್ ನಲ್ಲಿದ್ದ ಭಾರತೀಯ ಯೋಧನೊಬ್ಬ ಶಾಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿಯಾಗಿರುವ ಝಹಾರ್ನಾಅಹ್ಮದ್ ನಾಪತ್ತೆಯಾಗಿರುವ ಯೋಧರಾಗಿದ್ದು, 173 ಪ್ರಾದೇಶಿಕ ಸೈನ್ಯದ ಯೋಧರಾಗಿದ್ದಾರೆ.
ಎಕೆ-47, 3 ಮ್ಯಾಗಜಿನ್ ಗುಂಡುಗಳೊಂದಿಗೆ ಯೋಧ ನಾಪತ್ತೆಯಾಗಿದ್ದು, ನಾಪತ್ತೆ ಹಿಂದೆ ಹಲವು ಶಂಕೆಗಳು ಮೂಡತೊಡಗಿವೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ.