6 ತಿಂಗಳಲ್ಲಿ ಇಸ್ಲಾಂಗೆ ಮತಾಂತರಾಗಿ, ಇಲ್ಲದಿದ್ದರೆ ಕೈ-ಕಾಲು ಕಟ್: ಕೇರಳ ಲೇಖಕರಿಗೆ ಬೆದರಿಕೆ ಪತ್ರ

ಮಲಯಾಳಂನ ಖ್ಯಾತ ಲೇಖಕ ಕೆಪಿ ರಾಮನುಣ್ಣಿ ಅವರಿಗೆ ಆರು ತಿಂಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಾಗಿ ಇಲ್ಲದಿದ್ದರೆ ಕೈ-ಕೈಲು ಕಳೆದುಕೊಳ್ಳಲು ಸಿದ್ಧರಾಗಿ ಎಂಬ ಬೆದರಿಕೆ ಪತ್ರ...
ಕೆಪಿ ರಾಮನುಣ್ಣಿ
ಕೆಪಿ ರಾಮನುಣ್ಣಿ
Updated on: 
ಮಲಯಾಳಂನ ಖ್ಯಾತ ಲೇಖಕ ಕೆಪಿ ರಾಮನುಣ್ಣಿ ಅವರಿಗೆ ಆರು ತಿಂಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಾಗಿ ಇಲ್ಲದಿದ್ದರೆ ಕೈ-ಕೈಲು ಕಳೆದುಕೊಳ್ಳಲು ಸಿದ್ಧರಾಗಿ ಎಂಬ ಬೆದರಿಕೆ ಪತ್ರ ಬಂದಿದೆ. 
ಕೆಪಿ ರಾಮನುಣ್ಣಿ ಅವರಿಗೆ ಮಲ್ಲಾಪುರಂ ಮಂಜೇರಿಯಿಂದ ಈ ಬೆದರಿಕೆ ಪತ್ರ ಬಂದಿದೆ. ಇದರಲ್ಲಿ ಅವರನ್ನು ಇನ್ನು ಆರು ತಿಂಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ. ಒಂದು ವೇಳೆ ಮತಾಂತರಗೊಳ್ಳದಿದ್ದರೆ ಬಲಗೈ ಹಾಗೂ ಎಡಗಾಲು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. 
ಕೆಪಿ ರಾಮನುಣ್ಣಿ ನೀವು ಬರೆದಿರುವ ಲೇಖನಗಳು ಮುಸ್ಲಿಂ ಯುವಕರ ಹಾದಿ ತಪ್ಪಿಸುವಂತಿದೆ. ಮುಸ್ಲಿಂರ ಧಾರ್ಮಿಕತೆಗೆ ಧಕ್ಕೆ ಉಂಟಾಗುವಂತೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಪ್ರೋ.ಟಿಜೆ ಜೋಸೆಫ್ ಬಲಗೈ ಕಳೆದುಕೊಂಡಂತೆ ನಿಮಗೂ ಇಂತ ಪರಿಸ್ಥಿತಿ ಬರುತ್ತದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಂಬಂಧ ರಾಮನುಣ್ಣಿ ಅವರು ಕೋಳಿಕೋಡ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
ರಾಮನುಣ್ಣಿ ಅವರು ಬರೆದಿದ್ದ ಸೂಫಿ ಪರಂಜ ಕಥಾ ಕಾದಂಬರಿಯು ಸಿನಿಮಾ ಆಗಿದ್ದು ಇದು ಮುಸ್ಲಿಂ ಯುವಕ ಹಾಗೂ ಹಿಂದು ಯುವತಿ ನಡುವಿನ ಪ್ರೇಮ ಕಥೆಯನ್ನು ಹೊಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com