ಅಬೂಬಕರ್ ಅಲ್ ಬಾಗ್ದಾದಿ
ಅಬೂಬಕರ್ ಅಲ್ ಬಾಗ್ದಾದಿ

ಇಸಿಸ್ ಮುಖ್ಯಸ್ಥ ಅಬುಬಕ್‍ರ್‍ ಅಲ್ ಬಾಗ್ದಾದಿ ಇನ್ನೂ ಜೀವಂತ: ಅಮೆರಿಕ ರಕ್ಷಣಾ ಸಚಿವ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಸತ್ತಿಲ್ಲ. ಇನ್ನೂ ಜೀವಂತವಾಗಿದ್ದಾನೆ ಎಂಬ ನಂಬಿಕೆ ಇದೆ ಎಂದು ಅಮೆರಿಕ ರಕ್ಷಣಾ...
ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಸತ್ತಿಲ್ಲ. ಇನ್ನೂ ಜೀವಂತವಾಗಿದ್ದಾನೆ ಎಂಬ ನಂಬಿಕೆ ಇದೆ ಎಂದು ಅಮೆರಿಕ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಜೇಮ್ಸ್ ಮ್ಯಾಟೀಸ್, ನನ್ನ ಪ್ರಕಾರ ಬಾಗ್ದಾದಿ ಇನ್ನೂ ಜೀವಂತ ಇದ್ದಾನೆ. ನಾವೇ ಸ್ವತಃ ಆತನನ್ನು ಕೊಲ್ಲುವ ತನಕವೂ ಆತ ಜೀವಂತವೇ ಇರುವುದಾಗಿ ನಾನು ಭಾವಿಸುತ್ತೇನೆ. ಆದ್ದರಿಂದ ಆತ ಇನ್ನೂ ಸತ್ತಿಲ್ಲ ಜೀವಂತ ಇದ್ದಾನೆ ಎಂದು ನಾನು ಹೇಳುತ್ತೇನೆ ಎಂದರು. 
ಬಾಗ್ದಾದಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇಸಿಸ್ ವಶದಲ್ಲಿರುವ ಇರಾಕ್ ಮತ್ತು ಸಿರಿಯಾದಲ್ಲಿನ ಸುರಕ್ಷಿತ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದಾನೆ ಎಂಬ ವದಂತಿಗಳು ಎಲ್ಲೆಡೆ ಹಬ್ಬಿವೆ. 
ಕಳೆದ ತಿಂಗಳಲ್ಲಿ ರಷ್ಯಾದ ಸೇನೆಯು ಸಿರಿಯಾದ ರಕ್ಕಾ ಸಮೀಪದಲ್ಲಿ ಕಳೆದ ಮೇ 28ರಂದು ತಾನು ನಡೆಸಿದ್ದ ವಾಯುದಾಳಿಯಲ್ಲಿ ಬಾಗ್ದಾದಿ ಹತನಾಗಿದ್ದಾನೆ ಎಂದು ಹೇಳಿತ್ತು.

Related Stories

No stories found.

Advertisement

X
Kannada Prabha
www.kannadaprabha.com