ಪ್ರತಿಭಟನೆಗೆ ಕರೆ ನೀಡಿದ್ದ ಸಯೀದ್ ಅಲಿ ಗಿಲಾನಿ ಹಾಗೂ ಮಿರ್ವಾಜಾ ಉಮರ್ ಫಾರೂಕ್ ಶ್ರೀನಗರದಲ್ಲಿ ಗೃಹ ಬಂಧನಕ್ಕೊಳಪಡಿಸಲಾಗಿದ್ದರೆ, ಯಾಸೀನ್ ಮಲ್ಲೀಕ್ ನ್ನು ಶ್ರೀನಗರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಸೆಕ್ಷನ್ 144 ಸಿಆರ್ ಪಿಸಿ ಅಡಿಯಲ್ಲಿ ನಿರ್ಬಂಧ ವಿಧಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದ್ದು, ರೈನಾವಾರಿ, ಖನ್ಯಾರ್, ನೌಹಟ್ಟಾ, ಎಂಆರ್ ಗಂಜ್ ಹಾಗೂ ಸಾಫಾ ಕಾದಲ್ ನಲ್ಲಿ ನಿರ್ಬಂಧ ವಿಧಿಸಲಾಗಿದೆ.