2,000 ರೂ. ನೋಟುಗಳನ್ನು ಹಿಂಪಡೆಯುವುದಿಲ್ಲ, 200 ರೂ. ನೋಟು ಶೀಘ್ರದಲ್ಲೆ ಚಲಾವಣೆಗೆ: ಗಂಗ್ವಾರ್

ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ರದ್ದುಗೊಳಿಸಲಿದೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್, 2,000 ರೂ ನೋಟುಗಳನ್ನು...
ಸಂತೋಷ್ ಕುಮರ್ ಗಂಗ್ವಾರ್
ಸಂತೋಷ್ ಕುಮರ್ ಗಂಗ್ವಾರ್
Updated on
ನವದೆಹಲಿ: ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ರದ್ದುಗೊಳಿಸಲಿದೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್, 2,000 ರೂ ನೋಟುಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದ್ದಾರೆ. 
"ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ರದ್ದು ಮಾಡುವುದಿಲ್ಲ, ಆದರೆ 200 ರೂ ನೋಟುಗಳನ್ನು ಪರಿಚಯಿಸಲಿದೆ ಎಂದು ಐಎಎನ್ಎಸ್ ಸಂದರ್ಶನದಲ್ಲಿ ಗಂಗ್ವಾರ್ ತಿಳಿಸಿದ್ದಾರೆ. 2,000 ರೂ ನೋಟುಗಳ ಮುದ್ರಣ ಕಡಿಮೆ ಮಾಡುವುದು ಬೇರೆಯ ವಿಷಯ, ಆದರೂ ಈ ಬಗ್ಗೆ ಆರ್ ಬಿಯಿಂದ ಸ್ಪಷ್ಟನೆ ಸಿಗಬೇಕಿದೆ. ಆರ್ ಬಿಐ 2,000 ರೂ ನೋಟುಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಗಂಗ್ವಾರ್ ಹೇಳಿದ್ದಾರೆ. 
ಆರ್ ಬಿಐ ಶೀಘ್ರವೇ 200 ರೂ ನೋಟುಗಳನ್ನು ಚಲಾವಣೆಗೆ ತರಲಿದೆ ಎಂಬ ಮಾಹಿತಿ ಬರುತ್ತಿದ್ದಂತೆಯೇ, ರೂ 2,000 ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್ ಸ್ಪಷ್ಟನೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com