ಬಿಹಾರ: ಮಾಜಿ ಸಂಸದ ಶಹಾಬುದ್ದೀನ್ ಆಪ್ತ, ಆರ್ ಜೆಡಿ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಆಪ್ತ ಹಾಗೂ ಆರ್ ಜೆಡಿಎ ಕಾರ್ಯಕರ್ತ ಮಿನಾಜ್ ಖಾನ್ ಅವರನ್ನು....
ಸಾಂದರ್ಭೀಕ ಚಿತ್ರ
ಸಾಂದರ್ಭೀಕ ಚಿತ್ರ
Updated on: 
ಸಿವಾನ್(ಬಿಹಾರ): ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಆಪ್ತ ಹಾಗೂ ಆರ್ ಜೆಡಿಎ ಕಾರ್ಯಕರ್ತ ಮಿನಾಜ್ ಖಾನ್ ಅವರನ್ನು ಶುಕ್ರವಾರ ತಡರಾತ್ರಿ ಬಿಹಾದ ಸಿವಾನ್ ಜಿಲ್ಲೆಯ ಶೇಖಾಪುರ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸದ್ಯ ಭಾರಿ ಭದ್ರತೆಯಿರುವ ತಿಹಾರ್ ಜೈಲಿನಲ್ಲಿರುವ ಶಹಾಬುದ್ದೀನ್ ಆಪ್ತನನ್ನು ಗ್ಯಾಂಗ್ ಸ್ಟರ್ ರಾಜಾ ಖಾನ್ ಹಾಗೂ ಆತನ ಸಹಚರರು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹತ್ಯೆಯಾದ ಮಿನಾಜ್ ಖಾನ್ ಮನೆಯ ಬಳಿ ಪೊಲೀಸರು ಒಂದು ಕಾರ್ಬೈನ್, ಬಾಂಬ್ ಹಾಗೂ ಪೆಟ್ರೋಲ್ ಅನ್ನು ಜಪ್ತಿ ಮಾಡಿದ್ದಾರೆ. ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸಂಜೀತ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com