ಮಿಲಿಟರಿ ಪೊಲೀಸ್ ನಲ್ಲಿ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿ ನೇಮಕ: ಜನರಲ್ ರಾವತ್

ಸಶಸ್ತ್ರ ಪಡೆಯಲ್ಲಿ ಇತರ ಆಯ್ಕೆಗಳನ್ನು ಪರಿಶೀಲಿಸುವ ಮುನ್ನ ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆ...
ಜನರಲ್ ಬಿಪಿನ್ ರಾವತ್
ಜನರಲ್ ಬಿಪಿನ್ ರಾವತ್
Updated on: 
ಡೆಹ್ರಾಡೂನ್: ಸಶಸ್ತ್ರ ಪಡೆಯಲ್ಲಿ ಇತರ ಆಯ್ಕೆಗಳನ್ನು ಪರಿಶೀಲಿಸುವ ಮುನ್ನ ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಭಾರತೀಯ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಮಹಿಳೆಯರನ್ನು ಆರಂಭದಲ್ಲಿ ಮಿಲಿಟರಿ ಪೊಲೀಸ್ ಪಡೆಯ ಜವಾನರಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಇದು ಯಶಸ್ವಿಯಾದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಡೆಹ್ರಾಡೂನ್ ನಲ್ಲಿ ಇಂದು ಪೆರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಹೇಳಿದರು.
ಹಲವು ಸಂದರ್ಭಗಳಲ್ಲಿ ಜನರು ಕಾರ್ಯಾಚರಣೆಯಲ್ಲಿರುವಾಗ ನಾವು ಜನರನ್ನು ಎದುರಿಸಬೇಕಾಗುತ್ತದೆ ಮತ್ತು ಇನ್ನು ಕೆಲ ಸಂದರ್ಭಗಳಲ್ಲಿ ಮಹಿಳೆಯರು ನಮ್ಮ ಮುಂದೆ ಬರುತ್ತಾರೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಬಿಪಿನ್ ರಾವತ್ ಅವರು, ಯುದ್ಧ ಭೂಮಿಯಲ್ಲಿ ಹೋರಾಡಲು ಭಾರತೀಯ ಸೇನೆಯಲ್ಲಿ ಮಹಿಳಾ ಸಿಬ್ಬಂದಿ ನೇಮಕ ಮಾಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು.
ಪ್ರಸ್ತುತ ಮಹಿಳೆಯರನ್ನು ಸೇನೆಯ ಆಯ್ದ ವಿಭಾಗಗಳಲ್ಲಿ ಉದಾಹರಣೆಗೆ ವೈದ್ಯಕೀಯ, ಕಾನೂನು, ಶಿಕ್ಷಣ, ಸಿಗ್ನಲ್ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ನೇಮಕಾತಿ ಮಾಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com