ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಜನಾಥ್ ಸಿಂಗ್ ಕಲ್ಯಾಣ್ ಸಿಂಗ್ ಸೇರಿದಂತೆ ಅಧಿಕಾರದಲ್ಲಿದ್ದ ಹಲವು ನಾಯಕರು ಈ ಹಿಂದೆ ಇಫ್ತಾರ್ ಕೂಟ ಆಯೋಜಿಸಿದ್ದರು. ಆದರೆ ಈ ಬಾರಿ ಯೋಗಿ ಆದಿತ್ಯನಾಥ್ ಇಫ್ತಾರ್ ಕೂಟ ಆಯೋಜಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸಂಘಟನೆಯಾಗಿರುವ ಮುಸ್ಲೀಂ ರಾಷ್ಟ್ರೀಯ ಮಂಚ್(ಆರ್ ಎಂಎಂ) ಸಸ್ಯಹಾರಿ ಇಫ್ತಾರ್ ಕೂಟವನ್ನು ದೇಶಾದ್ಯಂತ ಆಯೋಜಿಸುತ್ತಿದೆ.