ರಾಹುಲ್ ಗಾಂಧಿಯನ್ನು 'ಪಪ್ಪು' ಎಂದಿಲ್ಲ; ಕಾಂಗ್ರೆಸ್ ನಾಯಕ ಸ್ಪಷ್ಟನೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು 'ಪಪ್ಪು' ಎಂದು ಕರೆದಿಲ್ಲ ಎಂದು ಮೀರುತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ಪ್ರಧಾನ್ ಅವರು ಬುಧವಾರ ಹೇಳಿದ್ದಾರೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on
ಮೀರುತ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು 'ಪಪ್ಪು' ಎಂದು ಕರೆದಿಲ್ಲ ಎಂದು ಮೀರುತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ಪ್ರಧಾನ್ ಅವರು ಬುಧವಾರ ಹೇಳಿದ್ದಾರೆ. 
ಮಧ್ಯಪ್ರದೇಶದ ಮಂಡಸೌರ್ ನಲ್ಲಿ ರೈತರ ಗಲಭೆ ನಡೆದ ನಂತರ ಅಲ್ಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ ಮೆಸೇಜ್ ಕಳುಹಿಸಿದ್ದ ವಿನಯ್ ಪ್ರಧಾನ್ ಅವರು, ರಾಹುಲ್'ರನ್ನು ಪಪ್ಪು ಎಂದು ಕರೆದಿದ್ದರು. 
ಪಪ್ಪು ಅದಾನಿ, ಅಂಬಾನಿ, ಮಲ್ಯ ಅವರೊಂದಿಗೆ ಕೈ ಜೋಡಿಸಬಹುದಿತ್ತು. ಪಪ್ಪು ಸಚಿವ, ಪ್ರಧಾನ ಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡಲಿಲ್ಲ. ಆದರೆ ಮಂಡಸೌರ್ ಗೆ ತೆರಳಿ ಜೀವನ ಕಂಡುಕೊಂಡಿದ್ದಾರೆ ಎಂದು ಪ್ರಧಾನ್ ಹೇಳಿದ್ದಾರೆಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. 
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಾಮಕೃಷ್ಣ ದ್ವಿವೇದಿಯವರು ಪ್ರಧಾನ್ ಅವರನ್ನು ಪಕ್ಷದ ಎಲ್ಲಾ ಹುದ್ದೆಯಿಂದ ವಜಾಗಾಳಿಸಿದ್ದರು. 
ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ವಿನಯ್ ಪ್ರಧಾನ್ ಅವರು, ನನ್ನ ಪ್ರತಿಕ್ರಿಯೆಯನ್ನೇ ಕೇಳದೆ ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಂಡಿದೆ. ನಾನು ರಾಹುಲ್'ರನ್ನು ಪಪ್ಪು ಎಂದು ಕರೆದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com