ಲೈಂಗಿಕ ಕಿರುಕುಳ ಆರೋಪ: ಟಿವಿಎಫ್ ಸಿಇಒ ಸ್ಥಾನದಿಂದ ಕೆಳಗಿಳಿದ ಅರ್ನಬ್

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದಿ ವೈರಲ್ ಫೀವರ್ ಕಂಪನಿಯ ಸಿಇಒ ಅರ್ನಬ್ ಕುಮಾರ್ ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ...
ಅರ್ನಬ್ ಕುಮಾರ್
ಅರ್ನಬ್ ಕುಮಾರ್
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದಿ ವೈರಲ್ ಫೀವರ್ ಕಂಪನಿಯ ಸಿಇಒ ಅರ್ನಬ್ ಕುಮಾರ್ ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ. 
ಸಂಸ್ಥೆಗಿಂತ ಯಾರು ದೊಡ್ಡವರಲ್ಲ ಹೀಗಾಗಿ ನನ್ನ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಕಂಟೆಂಟ್ ಟೀಮ್ ನ ಮೆಂಟರ್ ಆಗಿ ಮಾತ್ರ ಕಾರ್ಯನಿರ್ವಹಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. 
ಇತ್ತೀಚೆಗೆ ನನ್ನ ಮೇಲೆ ವೈಯಕ್ತಿಕ ನಿಂದನೆಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ತಾವು ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಅರ್ನಬ್ ಕುಮಾರ್ ಹೇಳಿದ್ದಾರೆ. ಇನ್ನು ಅರ್ನಬ್ ಕುಮಾರ್ ಸ್ಥಾನಕ್ಕೆ ಧವಾನ್ ಗುಸೈನ್ ರನ್ನು ನೇಮಿಸಲಾಗಿದೆ. 
ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅರ್ನಬ್ ಕುಮಾರ್ ರಿಂದ ತಮಗಾದ ಕೆಟ್ಟ ಅನುಭವ, ಆತನಿಂದ ತಾವು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಕಿರುಕುಳದ ಬಗ್ಗೆ ಬರೆದುಕೊಂಡಿದ್ದರು. ಇದಾದ ಬಳಿಕ ಇನ್ನು ಹಲವು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com