ಜಮ್ಮು-ಕಾಶ್ಮೀರದಲ್ಲಿ ಪಾಕ್ ಬ್ಯಾಟ್ ಪಡೆ ದಾಳಿ: ಇಬ್ಬರು ಯೋಧರು ಹುತಾತ್ಮ

ಕೆಲ ದಿನಗಳ ಹಿಂದಷ್ಟೇ ಇಬ್ಬರು ಯೋಧರ ಶಿರಚ್ಛೇದ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನ ಬಾರ್ಡರ್ ಆ್ಯಕ್ಷ್ ಟೀಮ್ (ಬ್ಯಾಟ್) ಅದೇ ರೀತಿಯ ಮತ್ತೊಂದು ಕುಕೃತ್ಯವನ್ನು ಎಸಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಜಮ್ಮು; ಕೆಲ ದಿನಗಳ ಹಿಂದಷ್ಟೇ ಇಬ್ಬರು ಯೋಧರ ಶಿರಚ್ಛೇದ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನ ಬಾರ್ಡರ್ ಆ್ಯಕ್ಷ್ ಟೀಮ್ (ಬ್ಯಾಟ್) ಅದೇ ರೀತಿಯ ಮತ್ತೊಂದು ಕುಕೃತ್ಯವನ್ನು ಎಸಗಿದೆ. 
ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿನ ಗಡಿಯಿಂದ 600 ಮೀಟರ್ ಒಳ ನುಸುಳಿರುವ ಉಗ್ರರು ಸೇನೆಯ ದಾಳಿ ನಡೆಸಿದ್ದಾರೆ. 
ಪಾಕಿಸ್ತಾನ ನಡೆಸಿದ ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಪ್ರತಿ ದಾಳಿ ನಡೆಸುವ ಮೂಲಕ ಸೇನೆ ಓರ್ವ ದಾಳಿಕೋರನನ್ನು ಹತ್ಯೆ ಮಾಡಿದೆ. 
ಹುತಾತ್ಮ ಯೋಧರು ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿದ ಮರಾಠ ಲಘು ಪದಾತಿ ದಳದವರಾಗಿದ್ದು, ಔರಂಗಾಬಾದ್ ನ ನಾಯಕ್ ಜಾಧವ್ ಸಂದೀಪ್ ಮತ್ತು ಕೊಲ್ಹಾಪುರದ ಮಾನೆ ಸಾವನ್ ಬಾಲ್ಕು ಎಂದು ಗುರ್ತಿಸಲಾಗಿದೆ. 
ಪ್ರತಿ ದಾಳಿಯಲ್ಲಿ ಮತ್ತೊಬ್ಬ ದಾಳಿಕೋರ ಗಾಯಗೊಂಡಿದ್ದು. ಆತನನ್ನು ಪಾಕಿಸ್ತಾನ ಸೇನೆ ಹಿಂಪಡೆದುಕಕೊಂಡಿದೆ. ರಾತ್ರಿ 2 ಗಂಟೆ ವೇಳೆಯಲ್ಲಿ ಗಡಿ ನುಗ್ಗಿದ್ದ ಪಾಕಿಸ್ತಾನ ಬ್ಯಾಟ್ ಪಡೆ ದಾಳಿತ್ತು ಎಂದು ಅಧಿಕಾರಿಗಳಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com