ಹಳೆಯ ವಿಡಿಯೋ, ಪತ್ರಿಕಾ ವರದಿ ಉಲ್ಲೇಖಿಸಿ ಮೀರಾ ಕುಮಾರ್ ವಿರುದ್ಧ ಸುಷ್ಮಾ ಟೀಕೆ

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ಸುಷ್ಮಾ ಸ್ವರಾಜ್ ಟಿಕಾಪ್ರಹಾರ ನಡೆಸಿದ್ದು, 2013 ರಲ್ಲಿ ತಾವು ವಿಪಕ್ಷ ನಾಯಕಿಯಾಗಿದ್ದಾಗಿನ ಸಂಸತ್ ಕಲಾಪದ ವಿಡಿಯೋ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
Updated on: 
ನವದೆಹಲಿ: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ಸುಷ್ಮಾ ಸ್ವರಾಜ್ ಟಿಕಾಪ್ರಹಾರ ನಡೆಸಿದ್ದು, 2013 ರಲ್ಲಿ ತಾವು ವಿಪಕ್ಷ ನಾಯಕಿಯಾಗಿದ್ದಾಗಿನ ಸಂಸತ್ ಕಲಾಪದ ವಿಡಿಯೋ ಹಾಗೂ ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದಾರೆ. 
2013 ರಲ್ಲಿ ನಡೆದ ಬಜೆಟ್ ಅಧಿವೇಶನದ ಸಂಸತ್ ಕಲಾಪದಲ್ಲಿ ವಿಪಕ್ಷ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಅಂದಿನ ಯುಪಿಎ ಸರ್ಕಾರದ ಹಗರಣಗಳ ಬಗ್ಗೆ ಮಾತನಾಡುತ್ತಾ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಸ್ಪೀಕರ್ ಮೀರಾಕುಮಾರ್ "ಆಲ್ ರೈಟ್ ಥ್ಯಾಂಕ್ ಯೂ, ಓಕೆ" ನಾನು ಕಲಾಪವನ್ನು ಮುಂದುವರೆಸಬೇಕು ಎಂದು ಹೇಳಿ ಸುಷ್ಮಾ ಸ್ವರಾಜ್ ಅವರನ್ನು ತಡೆದಿದ್ದರು. ಈ ಮೂಲಕ ಸುಷ್ಮಾ ಸ್ವರಾಜ್ ಅವರ ಭಾಷಣವನ್ನು ಮೊಟಕುಗೊಳಿಸಲು ಯತ್ನಿಸಿದ್ದರು. 
ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸುಷ್ಮಾ ಸ್ವರಾಜ್, ಮೀರಾ ಕುಮಾರ್ ಸ್ಪೀಕರ್ ಆಗಿದ್ದಾಗ ವಿಪಕ್ಷ ನಾಯಕರನ್ನು ನಡೆಸಿಕೊಂಡ ರೀತಿ ಹೀಗಿದೆ ಎಂದು ಹೇಳಿ, ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯನ್ನು ಟೀಕಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com