ಮಧ್ಯ ಪ್ರದೇಶ: ನಿರ್ಮಾಣ ಹಂತದ ಪೊಲೀಸ್ ಅಕಾಡೆಮಿ ಕಟ್ಟಡ ಕುಸಿತ, ಓರ್ವನ ಸಾವು, ಹಲವರಿಗೆ ಗಾಯ

ನಿರ್ಮಾಣ ಹಂತದ ಪೊಲೀಸ್ ತರಬೇತಿ ಕೇಂದ್ರೀಯ ಅಕಾಡೆಮಿ ಕಟ್ಟಡ ಕುಸಿದ ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಕಟ್ಟಡ ಕುಸಿತ
ಕಟ್ಟಡ ಕುಸಿತ
Updated on: 

ಭೋಪಾಲ್: ನಿರ್ಮಾಣ ಹಂತದ ಪೊಲೀಸ್ ತರಬೇತಿ ಕೇಂದ್ರೀಯ ಅಕಾಡೆಮಿ ಕಟ್ಟಡ ಕುಸಿದ ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದಲ್ಲಿ  ನಡೆದಿದೆ.

ಮಧ್ಯ ಪ್ರದೇಶದ ಭೋಪಾಲ್ ನ ಬಿಲ್ಖಿರಿಯಾ ಪ್ರದೇಶದಲ್ಲಿದ್ದ ನಿರ್ಮಿಸಲಾಗುತ್ತಿರುವ ಕಟ್ಟಡ ಕಳೆದ ರಾತ್ರಿ ಕುಸಿದಿದ್ದು, ಪರಿಣಾಮ ಕಟ್ಟಡದ ಕೆಳಗೆ ಇದ್ದವರ ಪೈಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಂತೆಯೇ ಇತರೆ 16 ಮಂದಿ  ಗಾಯಗೊಂಡಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ  ನಡೆಸುತ್ತಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಹಲವು ಮಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಕಟ್ಟಡ ಕುಸಿತ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್
ಇನ್ನು ಘಟನೆ ಕುರಿತಂತೆ ವಿಚಾರ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳಿಂದ ಮಾಹಿತ ಪಡೆದಿರುವ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಅವರು ತನಿಖೆಗೆ ಆದೇಶಿಸಿದ್ದಾರೆ. ಅಂತೆಯೇ ಕಟ್ಟಡ ಕುಸಿತ ಸಂತ್ರಸ್ತರಿಗೆ ಪರಿಹಾರ ಕೂಡ  ಘೋಷಣೆ ಮಾಡಿದ್ದಾರೆ. ಸತ್ತ ವ್ಯಕ್ತಿಯ ಕುಟುಂಬಕ್ಕೆತಲಾ 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಮತ್ತು ಸಣ್ಣ ಪುಟ್ಟ ಗಾಯಾಳುಗಳಿಗೆ ಸಾವಿರ ಘೋಷಣೆ ಮಾಡಿದ್ದಾರೆ. ಇದಲ್ಲದೆ ಗಾಯಾಳುಗಳಿಗೆ ಉಚಿಚ ಚಿಕಿತ್ಸೆ  ಭರವಸೆ ಕೂಡ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com