ವಿಶ್ವದ ದಢೂತಿ ಮಹಿಳೆಗೆ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಯಶಸ್ವಿ

ತೂಕ ಇಳಿಸಿಕೊಳ್ಳಲು ಮುಂಬೈ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವದ ದಢೂತಿ ಮಹಿಳೆ ಎಮಾನ್ ಅಹ್ಮದ್ ಅವರಿಗೆ ನಡೆಸಲಾದ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ (ತೂಕ ಇಳಿಕೆಯ ಶಸ್ತ್ರಚಿಕಿತ್ಸೆ) ಯಶಸ್ವಿಯಾಗಿದೆ
ಎಮಾನ್ ಅಹ್ಮದ್
ಎಮಾನ್ ಅಹ್ಮದ್
ಮುಂಬೈ: ತೂಕ ಇಳಿಸಿಕೊಳ್ಳಲು ಮುಂಬೈ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವದ ದಢೂತಿ ಮಹಿಳೆ ಎಮಾನ್ ಅಹ್ಮದ್ ಅವರಿಗೆ ನಡೆಸಲಾದ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ (ತೂಕ ಇಳಿಕೆಯ ಶಸ್ತ್ರಚಿಕಿತ್ಸೆ) ಯಶಸ್ವಿಯಾಗಿದೆ ಎಂದು ಸೈಫೀ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 
ಈಗಾಗಲೇ 120 ಕೆಜಿ ತೂಕ ಇಳಿಸಿಕೊಂಡಿರುವ ಈಜಿಪ್ಟ್ ನ ಮಹಿಳೆಗೆ ಹೊಟ್ಟೆಭಾಗದಲ್ಲಿ ಕೊಬ್ಬನ್ನು ಕಡಿಮೆಗೊಳಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸೊಂಟದ ಭಾಗ ಶೇ.15 ರಷ್ಟು ಇಳಿಕೆಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮಾ.7 ರಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಮತ್ತೆ 100 ಕೆಜಿ ತೂಕ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ತೂಕ ಇಳಿಕೆ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವ ಮಹಿಳೆ ದ್ರವ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದಾರೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.  ಮುಂದಿನ ಶಸ್ತ್ರಚಿಕಿತ್ಸೆ ವೇಳೆಗೆ 100 ಕೆಜಿಯಷ್ಟು ತೂಕ ಇಳಿಕೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com