ಜೆಎನ್ ಯು ವಿವಿಯ ವಿದ್ಯಾರ್ಥಿ ಆತ್ಮಹತ್ಯೆ

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಓರ್ವ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೆಎನ್ ಯು ವಿವಿಯ ವಿದ್ಯಾರ್ಥಿ ಆತ್ಮಹತ್ಯೆ
ಜೆಎನ್ ಯು ವಿವಿಯ ವಿದ್ಯಾರ್ಥಿ ಆತ್ಮಹತ್ಯೆ
Updated on: 
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಓರ್ವ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ತತ್ವಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಕ್ರಿಶ್ ರಜಿನಿ (ಮುತ್ತು ಕೃಷ್ಣನ್) (25) ಮುನಿರ್ಕ ವಿಹಾರ್ ಕೊಠಡಿಯಲ್ಲಿ ಸೀಲಿಂಗ್ ಗೆ ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆಯಲ್ಲಿ ವಿದ್ಯಾರ್ಥಿಯ ಕೊಠಡಿ ಒಳಗಿನಿಂದ ಬಂದ್ ಆಗಿತ್ತು. ಸಹಪಾಠಿಗಳೊಂದಿಗೆ ಊಟಕ್ಕೆ ಹೋಗಿ ಬಂದ ನಂತರ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಹೇಳಿ ಕೊಠಡಿಗೆ ಹೋಗಿದ್ದ ವಿದ್ಯಾರ್ಥಿ ಕ್ರಿಶ್ ರಜಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 
ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಬಿವಿಪಿ ನಾಯಕ ಸೌರಭ್ ಶರ್ಮಾ, ನಮ್ಮೊಂದಿಗೆ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ಭರಿಸಲಾಗದ ದುಃಖ ಉಂಟು ಮಾಡಿದೆ ಎಂದು ಹೇಳಿದ್ದಾರೆ. 
ಆತ್ಮಹತ್ಯೆಗೂ ಮುನ್ನ ಫೇಸ್ ಬುಕ್ ನಲ್ಲಿ ಬೇಸರದಿಂದ ಪೋಸ್ಟ್ ನ್ನು ಬರೆದಿದ್ದ ಕ್ರಿಶ್ ರಜಿನಿ, ಸಮಾನತೆಯನ್ನು ನಿರಾಕರಿಸಿದರೆ ಎಲ್ಲವನ್ನೂ ನಿರಾಕರಿಸಿದಂತೆ, ಸ್ನಾತಕೋತ್ತರ  ತತ್ವಶಾಸ್ತ್ರ ಅಥವಾ ಪಿಹೆಚ್ ಡಿ ವಿಭಾಗದ ಪ್ರವೇಶದಲ್ಲಿ ಸಮಾನತೆ ಇಲ್ಲ. ಸಮಾನತೆಯನ್ನು ನಿರಾಕರಿಸಲಾಗುತ್ತಿದೆ. ಸುಖದೇವ್ ಥೋರಟ್ ಶಿಫಾರಸ್ಸುಗಳನ್ನು, ಶಿಕ್ಷಣವನ್ನು ಕೆಲವರಿಗೆ ನಿರಾಕರಿಸಲಾಗುತ್ತಿದೆ ಎಂದು ಬರೆದಿದ್ದಾರೆ. " ಅದು ಕ್ರಿಶ್ ಸಾವನ್ನಪ್ಪುವುದಕ್ಕೂ ಮುನ್ನ ಬರೆದಿದ್ದ ಕೊನೆಯ ಫೇಸ್ ಬುಕ್ ಪೋಸ್ಟ್ ಆಗಿತ್ತು. ಮತ್ತೊಮ್ಮೆ ದಲಿತ ಪಿಹೆಚ್ ಡಿ ವಿದ್ಯಾರ್ಥಿ ಜೀವ ಕಳೆದುಕೊಂಡಿದ್ದಾನೆ ಎಂದು ಜೆಎನ್ ಯು ವಿದ್ಯಾರ್ಥಿ ಆಶೀಶ್ ಪಾಂಡೆ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com